ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿಯ ವಿಭಿನ್ನ ಪ್ರಯತ್ನ

Spread the love

ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಗಣೇಶನ ವೇಷದಾರಿ ಧರಿಸಿ ರಕ್ತದಾನದ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ವಾಹನಸವಾರರು ಮತ್ತು ರಸ್ತೆ ಬದಿ ಇದ್ದ ಜನರಿಗೆ ಗಣೇಶ ವೇಷಧಾರಿ ಹಳೆ ಕೆಸರೆ ನಿವಾಸಿ ಲೋಹಿತ್ ಅವರು ರಕ್ತದಾನದ ಜಾಗೃತಿಯ ನಾಮಫಲಕ ಹಿಡಿದು ಕರಪತ್ರ ನೀಡಿ ವಿಶೇಷವಾಗಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಾವು ನಿರಂತರವಾಗಿ ರಕ್ತದಾನ ಬಗ್ಗೆ ಹಲವಾರು ರೀತಿ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ,ನಾಳೆ ಗೌರಿ ಗಣೇಶ ಹಬ್ಬ ಇರುವುದರಿಂದ ಒಂದು ವಿಭಿನ್ನವಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ ಎಂದು ತಿಳಿಸಿದರು.

ರಕ್ತದಾನ ಮಹಾದಾನ. ಮೂಢನಂಬಿಕೆಯನ್ನು ಬಿಟ್ಟು
ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು ಎಂದು ಹೇಳಿದರು.

ನೀವು ನೀಡುವ ರಕ್ತದಿಂದ ಇನ್ನೊಂದು ಜೀವ ಉಳಿಸಬಹುದು ದಯಮಾಡಿ ಯುವ ಪೀಳಿಗೆ ನಿರಂತರವಾಗಿ ಸ್ವಯಂ ಪ್ರೇರಿತ ರಕ್ತದಾನ ಮಾಡಬೇಕು ಎಂದು ಗಿರೀಶ್ ಮನವಿ ಮಾಡಿದರು.

ಗಿರೀಶ್ ಅವರಿಗೆ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಸಾಥ್ ನೀಡಿದರು, ಸೂರಜ್, ಸದಾಶಿವ್, ಚಂದ್ರು ಮತ್ತಿತರರು
ಹಾಜರಿದ್ದರು.