ಮೈಸೂರು: ಆಪ್ ಗೆ 16,500 ರೂ ಹಾಕಿದರೆ ದಿನಕ್ಕೆ 650 ರೂ ಬಡ್ಡಿ ಬರುತ್ತದೆ ಎಂದು ನಂಬಿಸಿ ಕುಟುಂಬವೊಂದಕ್ಕೆ 1.81 ಲಕ್ಷ ಹಣ ವಂಚಿಸಿದ ಪ್ರಕರಣ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ ವಂಚಿಸಲಾಗಿದೆ.
ಬಡೆಮಕಾನ್ ನಿವಾಸಿಗಳಾದ ರೊಮಾನಾ,ಮೆಹಬೂಬ್,ಅಜ್ಮಲ್ ಹಾಗೂ ಇಮ್ರಾನ್ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.
HUGE ಎಂಬ ಆಪ್ ಗೆ 16,500 ರೂ ಹಾಕಿದರೆ ಪ್ರತಿದಿನ 650ರೂ ಬಡ್ಡಿ ಬರುತ್ತದೆ ಎಂದು ಆರೋಪಿಗಳು ನೂರ್ ಜಾನ್ ಗೆ ನಂಬಿಸಿದ್ದಾರೆ.
ಮೊದಲು ನೂರ್ ಜಾನ್ ಹಾಗೂ ಇವರ ಪತಿ ಹಣ ಹೂಡಿದ್ದಾರೆ.ಒಂದು ವಾರದ ನಂತರ ಬಡ್ಡಿ ಹಣ ಡ್ರಾ ಮಾಡಿ ಕೊಳ್ಳಬಹುದು ಎಂದು ನಂಬಿಸಿದ್ದಾರೆ.
ಇತರರಿಗೆ ಹಣ ಹೂಡಿಕೆ ಮಾಡಿಸಿದರೆ ಕಮಿಷನ್ ಸಹ ಬರುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ನೂರ್ ಜಾನ್ ತನ್ನ ಕುಟುಂಬಸ್ಥರು ಹಾಗೂ ಪರಿಚಯಸ್ಥರು ಸೇರಿ 11 ಮಂದಿಯಿಂದ 1.81 ಲಕ್ಷ. ಹಣ ಹೂಡಿಸಿದ್ದಾರೆ.
ಒಂದು ವಾರದ ನಂತರ HUGE ಆಪ್ ನಿಂದ ಹಣ ಡ್ರಾ ಮಾಡಲು ಮುಂದಾದಾಗ ಆಪ್ ಓಪನ್ ಆಗಿಲ್ಲ.ಈ ಬಗ್ಗೆ ರುಮಾನಾ ರನ್ನ ಪ್ರಶ್ನಿಸಿದಾಗ ಆಪ್ ಕ್ಲೋಸ್ ಆದರೆ ನಾವೇನು ಮಾಡೋಕ್ಕೆ ಆಗಲ್ಲ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.
ವಂಚನೆಗೆ ಒಳಗಾದ ಎಲ್ಲರೂ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ದೂರು ದಾಖಲಿಸಿದ್ದಾರೆ.