ಮೈಸೂರು: ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ವತಿಯಿಂದ ಅತ್ಯಧಿಕ ಅಂಕ ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿವರ್ಷದಂತೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಪ್ರತಿವರ್ಷವೂ ಸಂಘದ ಸದಸ್ಯರಿಗೆ ನೀಡುವ ಪ್ರೋತ್ಸಾಹ ಧನ ದ ಚೆಕ್ ಅನ್ನು ಸಂಘದ ಸದಸ್ಯರಾದ ಶಿವರಾಮೇಗೌಡ ಅವರ ಪುತ್ರಿ ಶಿಲ್ಪ ಶ್ರೀ ಅವರಿಗೆ ವಿತರಣೆ ಮಾಡಲಾಯಿತು.
ಈಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅಧಿಕ ಅಂಕ ಗಳಿಸಿ ಪ್ರೋತ್ಸಾಹ ಧನಕ್ಕೆ ಅರ್ಹ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾರೆ.
ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹಿಳಾ ಘಟಕದ ಮುಖ್ಯಸ್ಥರಾದ ಸಂಗೀತ ಕೋಟೆಬಾಗಿ , ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅವಿನಾಶ್ ಗೌಡ, ಶಿವಣ್ಣ, ಮೈಸೂರು ಪದಾಧಿಕಾರಿಗಳು ಮತ್ತು ಹೋಟೆಲ್ ಕಾರ್ಮಿಕ ಮಿತ್ರರು ಚೆಕ್ಕನ್ನು ಹಸ್ತಾಂತರ ಮಾಡಿ ಮುಂದಿನ ವಿದ್ಯಾರ್ಥಿ ಜೀವನ ಉಜ್ವಲವಾಗಲಿ ಎಂದು ಶಿಲ್ಪ ಶ್ರೀ ಅವರಿಗೆ ಶುಭ ಹಾರೈಸಿದರು.