ಮೈಸೂರು: ಸದಾ ಕನ್ನಡಕ್ಕಾಗಿ ಹೋರಾಡಿದ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿದ್ದ ಸ ರ ಸುದರ್ಶನ್ ರವರ ಶೃದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಅಧ್ಯಕ್ಷರಾದ ಎಸ್ ಜಯಪ್ರಕಾಶ್ ನೇತೃತ್ವದಲ್ಲಿ ಮೈಸೂರಿನ ದೊಡ್ಡ ಗಡಿಯಾರ ವೃತ್ತದಲ್ಲಿ ಕಾವೇರಿ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ. ಎನ್. ಮಂಜೇಗೌಡ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ನಿರ್ಮಾಪಕ ಎಸ್ ಎ ಶ್ರೀನಿವಾಸ್, ಮೂಗೂರು ನಂಜುಂಡಸ್ವಾಮಿ, ಸುರೇಶ್ ಗೌಡ, ತೇಜೇಶ್ ಲೋಕೇಶ್ ಗೌಡ, ನಜರಬಾದ್ ನಟರಾಜ್, ವಿಕ್ರಂ ಅಯ್ಯಂಗಾರ್, ಟೈಗರ್ ಬಾಲಾಜಿ, ನೇಹಾ, ರಾಜಶೇಖರ್ , ಶಿವಕುಮಾರ್, ಹನುಮಂತಯ್ಯ, ಬಲರಾಂ, ಚಂದ್ರು, ರಘು ಅರಸ್, ಮುಕುಂದ, ವಿಷ್ಣು ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.