ಆನ್ಲೈನ್ ಗೇಮಿಂಗ್ ಬ್ಯಾನ್; ಕೇಂದ್ರದ ನಿರ್ಧಾರ ಶ್ಲಾಘನೀಯ-ಚಂದ್ರಶೇಖರ್

ಮೈಸೂರು: ಆನ್ಲೈನ್ ಗೇಮಿಂಗ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಹೇಳಿದ್ದಾರೆ.

ಆನ್ಲೈನ್ ಗೇಮ್ಸ್ ಗಳಿಂದ ಅದೆಷ್ಟೋ ಕುಟುಂಬಗಳು ಸರ್ವನಾಶವಾಗಿವೆ.ಎಷ್ಟೋ ವಿದ್ಯಾರ್ಥಿಗಳು ಆನ್ಲೈನ್ ಗೀಳಿಗೆ ಬಿದ್ದು ಆರ್ಥಿಕವಾಗಿ ಮಾತ್ರವಲ್ಲ ವಿದ್ಯಾಭ್ಯಾಸದಲ್ಲೂ ತೀವ್ರ ಹಾನಿಗೊಳಗಾಗಿದ್ದಾರೆ.

ಈ ದಿಸೆಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿತ್ತು.

ಅಲ್ಲದೆ ಗ್ರಾಹಕ ಪಂಚಾಯತ್ ಕರ್ನಾಟಕದಲ್ಲೂ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಗೇಮಿಂಗನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಗಳನ್ನು ಕೂಡ ಹಮ್ಮಿಕೊಂಡಿದ್ದಿತು ಎಂದು ಚಂದ್ರಶೇಖರ್
ತಿಳಿಸಿದ್ದಾರೆ.

ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಿದ್ದು ದಿಟ್ಟ ನಿರ್ಧಾರ ಎಂದು ಹೇಳಿದ್ದಾರೆ

ಈ ರೀತಿಯ ನಿರ್ಧಾರಗಳಿಂದ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯ. ಇದು ನಿರಂತರವಾಗಿ ಸಾಗಲು ಜನತೆ ಗ್ರಾಹಕ ಪಂಚಾಯತಿಯೊಂದಿಗೆ ಜೋಡಿಸುವುದು ಅವಶ್ಯಕ ಎಂದು ಸಿ ಎಸ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಗ್ರಾಹಕ ಪಂಚಾಯತ್ ಸದಸ್ಯರಾಗಿ ಸಮಾಜದಲ್ಲಿ ಸೂಕ್ತ ಗ್ರಾಹಕ ಹಿತ ನಿರ್ಣಯಗಳಲ್ಲಿ ಸಹಭಾಗಿಗಳಾಗಬೇಕೆಂದು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.