ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಮತ್ತು ಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಸಹಿತ ಮೊರದ ಬಾಗಿನ ನೀಡಲಾಯಿತು.
ಈ ಮಾತನಾಡಿದ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ,ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನ ಪೂಜಿಸುವುದು ಹಿಂದು ಧರ್ಮೀಯರ ಪದ್ಧತಿ ಎಂದು ಹೇಳಿದರು.
ಇಂತಹ ಪವಿತ್ರ ಪೂಜಾ ಸ್ಥಾನ ಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಮೈಸೂರಿನ ಅರಮನೆ ಆವರಣ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಹೆಚ್ಚು, ಅಂಥವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಉಂಟು ಮಾಡುತ್ತದೆ ಎಂದು ತಿಳಿಸಿದರು.
ಬಾಗಿನ ಪಡೆದ ಪೌರಕಾರ್ಮಿಕ ಮಹಿಳೆ ಜಯಲಕ್ಷ್ಮಿ ಮಾತನಾಡಿ ಪೌರಕಾರ್ಮಿಕರನ್ನು ಗುರುತಿಸಿ ಸಹೋದರಿಯಂತೆ
ಬಾಗಿನ ನೀಡಿರುವುದು ನಮ್ಮೆಲ್ಲರಿಗೂ ಸಂತಸ ಉಂಟು ಮಾಡಿದೆ ಇಂತಹ ಸಂಸ್ಥೆಗಳಿಗೆ ಧನ್ಯವಾದಗಳು
ಎಂದು ಹೇಳಿದರು.
ಅಥರ್ವ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ರಾಜ ಶಿವರಾಜ್, ಈ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,
ಮಂಜುಳಾ ಸೋಮಣ್ಣ, ಜ್ಯೋತಿ, ವರ್ಷಿಣಿ, ಹಾಗೂ ಪೌರಕಾರ್ಮಿಕ ಸಿಬ್ಬಂದಿ ಹಾಜರಿದ್ದರು.