ಮೈಸೂರು: ಹಳೇ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ಯುವಕನನ್ನು ತಡೆದು ದಾಳಿ ಮಾಡಿ ಚಾಕುವಿನಿಂದ ಇರಿದ ಘಟನೆ ಕಲ್ಯಾಣಗಿರಿಯ ಡಾ.ರಾಜಕುಮಾರ್ ರಸ್ತೆಯಲ್ಲಿ ನಡೆದಿದೆ.
ವಾಸೀಮ್ (28) ಎಂಬ ಯುವಕನಿಗೆ ಗುಂಪು ಚಾಕುವಿನಿಂದ ಇರಿದಿದ್ದು,ಆತ ಗಾಯಗೊಂಡಿದ್ದು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ತಿಕ್,ವೇಲು ಹಾಗೂ ಇತರರ ಮೇಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಂಟರಿಂಗ್ ಕೆಲಸ ಮಾಡುವ ವಾಸೀಮ್ ಆರ್ಯ ಬೇಕರಿ ಬಳಿ ಬರುತ್ತಿದ್ದಾಗ ಎದುರಾದ ಕಾರ್ತಿಕ್ ಗುಂಪು ವಾಸೀಮ್ ಮೇಲೆ ದಾಳಿ ಮಾಡಿದೆ.
ಗುಂಪಿನಿಂದ ತಪ್ಪಿಸಿಕೊಳ್ಳಲು ವಾಸೀಮ್ ಪ್ರಯತ್ನಿಸಿದರೂ ಬಿಡದೆ ಬೆನ್ನಿಗೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ.