ಮೈಸೂರು: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಹಿಂದುಳಿದ ವರ್ಗಗಳ ನೇತಾರ, ಮಹಾನ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ ದೇವರಾಜ ಅರಸು ರವರ 110 ನೇ ಜಯಂತಿ ಆಚರಿಸಲಾಯಿತು.
ಕಾವೇರಿ ಕ್ರಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಅವರು ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ಅನುಯಾಯಿಗಳಾದ ಪ್ರಮೋದ್ ಮಹಾಜನ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಡಾ. ಜೀವರಾಜ್ ಆಳ್ವ ಅವರುಗಳು ಅರಸು ಅವರ ಆದರ್ಶಗಳನ್ನು ಪಾಲನೆ ಮಾಡಿದವರು ಎಂದು ಸ್ಮರಿಸಿದರು.
ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದು ಅನೇಕ ಬಡವರು, ಕೂಲಿಕಾರರಿಗೆ ದೇವರಾದರು. ವರುಣಾ ಕಾಲುವೆಯನ್ನು ನಿರ್ಮಾಣ ಮಾಡಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದವರು.
ದೇವರಾಜ ಅರಸುರವರಿಗೆ ಅವರೇ ಸಾಟಿ ಹೊರತು ಬೇರಾರೂ ಇಲ್ಲ. ಹಿಂದುಳಿದ ವರ್ಗಗಳ ಜನಗಳ ಪಾಲಿನ ದೇವರು ಅವರು ಎಂದು ಹೇಳಿದರು.
ತೇಜೇಶ್ ಲೋಕೇಶ್ ಗೌಡ ನಿರೂಪಣೆ ಮಾಡಿದರು, ನೇಹಾ ಸಿಹಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ರಘು ಅರಸ್, ಕುಮಾರ್, ರವೀಶ್, ಚಂದ್ರು, ಪ್ರಜ್ವಲ್, ಪ್ರಭಾಕರ್, ಹಮೀದ್, ಸುಫಿಯಾ, ರಿಹಾನ್ ಮತ್ತಿತರರು ಉಪಸ್ಥಿತರಿದ್ದರು.

