ಮೈಸೂರು: ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಹರಿಕಾರ,ಭೂ ಸುಧಾರಣೆ ಹಾಗೂ ಉಳುವವರೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದ ಧೀಮಂತ ನಾಯಕ ಡಿ ದೇವರಾಜ ಅರಸು ರವರ 110 ನೇ ಜಯಂತಿ ಆಚರಿಸಲಾಯಿತು.
ಮೈಸೂರಿನ ಡಿ ದೇವರಾಜ ಅರಸು ರಸ್ತೆಯಲ್ಲಿ ಕರ್ನಾಟಕ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್
ದೇವರಾಜ ಅರಸು ಅವರು ಎಲ್ಲಾ ವರ್ಗಗಳ ಅಭಿವೃದ್ಧಿಗೂ ಶ್ರಮಿಸಿದವರು, ದನಿ ಇಲ್ಲದವರಿಗೆ ದನಿಯಾಗಿದ್ದರು, 12ನೇ ಶತಮಾನದ ಬಸವಣ್ಣನವರ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದವರು ಎಂದು ಬಣ್ಣಿಸಿದರು.
ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ರವಿ ಮಂಜೇಗೌಡನ ಕೊಪ್ಪಲು ಮಾತನಾಡಿ,ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಉಳುವವನೇ ಭೂ ಒಡೆಯನನ್ನಾಗಿ ಮಾಡಿದರು
ಎಂದು ಹೇಳಿದರು
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಜಿ ರಾಘವೇಂದ್ರ, ರವಿಚಂದ್ರ, ಎಸ್ ಎನ್ ರಾಜೇಶ,ನಜರ್ಬಾದ್ ಲೋಕೇಶ್, ದಿನೇಶ್, ಹರೀಶ್ ಗೌಡ, ನಿತಿನ,ಮೋಹನ್,ಕೃಷ್ಣಪ್ಪ ಗಂಟಯ್ಯ, ಈಶ್ವರ್, ಕಣ್ಣಣ್ಣ, ಮಹಾನ್ ಶ್ರೇಯಸ್,
ಮತ್ತಿತರರು ಹಾಜರಿದ್ದರು.
