ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

Spread the love

ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜು ಪ್ರಥಮ ಪದವಿಯ ಬಿ.ಸಿ.ಎ ಮತ್ತು ಬಿ.ಎಸ್ಸಿ
ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಹಾರಾಜ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಕೃಷ್ಣರಾಜ ಸಭಾ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

25 ಕಾಂಬಿನೇಷನ್ ನ 19 ವಿಭಾಗಗಳ ಮುಖ್ಯಸ್ಥರು ತಮ್ಮ ವಿಭಾಗಗಳ ಕುರಿತು ಅಗತ್ಯ ಮತ್ತು ಮೂಲಭೂತ ಮಾಹಿತಿ ನೀಡಿದರು.

ಅಧ್ಯಾಪಕರು ಮತ್ತು ಸಂಶೋಧನೆ, ಸಾಂಸ್ಕೃತಿಕ, ಎನ್.ಎಸ್.ಎಸ್.,ಎನ್.ಸಿ.ಸಿ, ಕ್ರೀಡೆ, ಆಪ್ತ ಸಲಹೆ, ಉದ್ಯೋಗ ಮಾಹಿತಿ ಕೋಶ, ರೇಂಜರ್ಸ್, ಸ್ವಚ್ಛತೆ, ಶಿಸ್ತು, ವಾಚನಾಲಯ, ಗುರುತಿನ ಚೀಟಿ, ವಿದ್ಯಾರ್ಥಿ ಕ್ಷೇಮಪಾಲನೆ, ವಿದ್ಯಾರ್ಥಿ ವೇತನ, ಮಹಿಳಾ ದೌರ್ಜನ್ಯ ತಡೆ, ವಿಜ್ಞಾನ ಸಮಿತಿ, ಕಚೇರಿ ನಿರ್ವಹಣೆ ಕೋಶ ಮತ್ತು ಇತರೆ ಹಲವು ಸಮಿತಿಗಳ ಕುರಿತು ಮಾಹಿತಿಯನ್ನು ಸಂಬಂಧಪಟ್ಟ ಸಂಚಾಲಕರು ವಿವರವಾಗಿ ಮಂಡಿಸಿದರು.

ಆರಂಭದಲ್ಲಿ ಸ್ವಾಯತ್ತ ಕಾಲೇಜಿನ ನಿರ್ವಹಣೆ ಮತ್ತು ಸೌಲಭ್ಯಗಳ ಕುರಿತು ಶೈಕ್ಷಣಿಕ ವಿಭಾಗದ ಡೀನ್ ಡಾ. ಶ್ರೀಪಾದ್ ಅವರು ಮಾಹಿತಿ ನೀಡಿದರು.

ಪರೀಕ್ಷೆ ವಿಭಾಗದ ಮುಖ್ಯಸ್ಥರಾದ ಡಾ. ತೋಯಜಾಕ್ಷ ಮತ್ತು ಉಪ ಮುಖ್ಯಸ್ಥ ಡಾ. ಸಂತೋಷ ಕುಮಾರ್ ಬಿ.ಎನ್.
ಅವರು ಪರೀಕ್ಷೆ ವಿಭಾಗದ ಪ್ರಾಮುಖ್ಯತೆ, ಪ್ರಶ್ನೆ ಪತ್ರಿಕೆ ತಯಾರಿ, ನಿರ್ವಹಣೆ ಬಗ್ಗೆ ವಿವರ ನೀಡಿದರು.

ಪ್ರವೇಶಾತಿ ಸಮಿತಿಯ ಸಂಚಾಲಕ ಡಾ.ನಟರಾಜ್ ಕೆ ಅವರು ಪ್ರವೇಶಾತಿ ಬಗ್ಗೆ ಮತ್ತು ಡಾ.ರವಿಶಂಕರ್ ಡಿ ಅವರು ಸಂಶೋಧನೆ ಕುರಿತು ಮಾಹಿತಿ ನೀಡಿದರು.

ಕಚೇರಿ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಕರ್ತವ್ಯ ಮತ್ತು ಮಹತ್ವದ ಕುರಿತು ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು
ಪ್ರಾಂಶುಪಾಲರಾದ ಪ್ರೊ.ಅಬ್ದುಲ್ ರಹಿಮಾನ್ ಎಂ ಅವರು ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದು ಆಶಿಸಿದರು.

ಮಹಾರಾಜ ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ .ಮಹೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ನಂದಕುಮಾರ್ ವಿ, ಕನ್ನಡ ಸಹ ಪ್ರಾಧ್ಯಾಪಕ ಡಾ. ಸಿದ್ದೇಗೌಡ ಎಸ್, ಸಹ ಪ್ರಾಧ್ಯಾಪಕ ಡಾ.ಪೃಥ್ವಿರಾಜ್ ಮತ್ತಿತರರು ಹಾಜರಿದ್ದರು.