(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಛಾಯಾಗ್ರಹಣ ವೃತ್ತಿ ಬಹಳ ಶ್ರೇಷ್ಠವಾದುದು ಎಂದು ನಗರ ಸಭಾಧ್ಯಕ್ಷೆ ರೇಖಾ ಬಣ್ಣಿಸಿದರು.
ಛಾಯಾಗ್ರಾಹಕರು ನಮ್ಮನ್ನು ಸುಂದರವಾಗಿ ಕಾಣುವಂತೆ ಸಾಕಷ್ಟು ಭಂಗಿಗಳಲ್ಲಿ ಫೋಟೋ ತೆಗೆಯುತ್ತಾರೆ ಎಂದು ಹೇಳಿದರು.
ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಪಟ್ಟಣದ ಗುರುಭವನದಲ್ಲಿ ನಡೆದ 186 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಾವರು, ಫೋಟೋ ತೆಗೆಯುವ ಮೂಲಕ ಈ ಹಿಂದಿನ ನಮ್ಮ ಮೇಮೋರಿಯನ್ನು ನೆನಪಿಸುವಂತೆ ಮಾಡುತ್ತಾರೆ ಎಂದು ತಿಳಿಸಿದರು.
ಸಂಘಗಳ ಅರಿವು ಕುರಿತು ಉಪನ್ಯಾಸ ನೀಡಿದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಸಿದ್ದಲಿಂಗಮೂರ್ತಿ ಅವರು ಛಾಯಾಚಿತ್ರಗ್ರಾಹಕರ ವೃತ್ತಿ ಒಂದು ಒಳ್ಳೆಯ ವೃತ್ತಿ, 1960 ರ ಸಹಕಾರ ಕಾಯ್ದೆಗಳ ಪ್ರಕಾರ ಕೊಳ್ಳೇಗಾಲ ಛಾಯಾಚಿತ್ರ ಗ್ರಾಹಕರ ಸಂಘ ನೊಂದಣಿಯಾಗಿದ್ದು, ಸಂಘ ಆರ್ಥಿಕ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಸಫಲತೆ ಕಂಡಿಲ್ಲ ಎಂದು ಹೇಳಿದರು.
ಸಂಘವನ್ನು ಬೈಲಾ ಪ್ರಕಾರ ನಡೆಸಬೇಕು, ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು, ಸರ್ವ ಸದಸ್ಯರ ಅಭಿವೃದ್ಧಿಗಾಗಿ ಸಂಘವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕ ನಿರೀಕ್ಷಕ ಡಿ.ಎಲ್ ಪ್ರಸಾದ್ ಮಾತನಾಡಿ ಸರ್ಕಾರ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಎಲ್ಲರೂ ಕಾರ್ಮಿಕ ಇಲಾಖೆಯ ಮೂಲಕ ನೊಂದಾಯಿಸಿಕೊಂಡು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು
ಡಾ ಬಿ ಆರ್ ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ ಮೂರ್ತಿ ಮಾತನಾಡಿ ಛಾಯಾಗ್ರಹಕರ ವೃತ್ತಿ ಬಹಳ ಜವಾಬ್ದಾರಿಯುತವಾಗಿದ್ದು, ನೀವಿಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದ್ದರಿಂದ ನಿಮ್ಮ ಇತಿ ಮಿತಿಯೊಳಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಛಾಯಾಚಿತ್ರಗ್ರಾಹಕರ ಸಂಘದ ಯಳಂದೂರು ತಾಲ್ಲೂಕು ಅಧ್ಯಕ್ಷ ಕೃಷ್ಣ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ನಾಗೇಂದ್ರ ಹನೂರು ತಾಲ್ಲೂಕು ಅಧ್ಯಕ್ಷ ಫಾರೂಕ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಜಯಪ್ರಕಾಶ್, ಗೌರವಾಧ್ಯಕ್ಷ ಷಣ್ಮುಖಸ್ವಾಮಿ, ಉಪಾಧ್ಯಕ್ಷ ಸರ್ದಾರ್ ಪಾಷ, ಕಾರ್ಯದರ್ಶಿ ರೋಷನ್ ಕುಮಾರ್, ಖಜಾಂಚಿ ಸಿ.ಪ್ರಸಾದ್ ಕುಮಾರ್, ನಿರ್ದೇಶಕರುಗಳಾದ ನವೀನ್ ಕುಮಾರ್, ವಸಂತ್ ಕುಮಾರ್, ಜಿ.ಆರ್.ರಘು, ಡಿ.ರಘುನಾಥ್, ರಕ್ಷಿತ್ ಕುಮಾರ್ ಎನ್ ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.