ಮೈಸೂರು: ಪಬ್ ನಲ್ಲಿ ಎಣ್ಣೆ ಹೊಡೆದು ಗಲಾಟೆ ಮಾಡಿದ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಅವರನ್ನು ಅಮಾನತು ಗೊಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಈ ಆದೇಶ ಹೊರಡಿಸಿದ್ದಾರೆ.
ಚಾಮುಂಡಿಬೆಟ್ಟದ ತಪ್ಪಲಿನ ಜೆಸಿ ನಗರದ ಪಬ್ ಒಂದಕ್ಕೆ ತೆರಳಿ ಕುಡಿದ ಮತ್ತಿನಲ್ಲಿ ಮೋಹನ್ ಕುಮಾರ್ ಸಿಬ್ಬಂದಿಗಳ ಜೊತೆ ಜಗಳವಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಅವಾಚ್ಯ ಶಬ್ದಗಳನ್ನ ಬಳಸಿ ಆವಾಜ್ ಹಾಕಿದ್ದರು.ಈ ವಿಚಾರಕ್ಕೆ ಸಂಭಂಧಪಟ್ಟಂತೆ ಕಮೀಷನರ್ ಸೀಮಾ ಲಾಟ್ಕರ್ ಶಿಸ್ತು ಕ್ರಮ ಕೈಗೊಂಡು,ಮೋಹನ್ ಕುಮಾರ್ ರನ್ನ ಅಮಾನತು ಪಡಿಸಿದ್ದಾರೆ.