ಅ ಕ ಬ್ರಾ ಪುರೋಹಿತರ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿ ಮೈ ಕುಮಾರ್ ಮರು ನೇಮಕ

Spread the love

ಮೈಸೂರು: ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರೂ, ಧಾರ್ಮಿಕ ಮುಖಂಡರಾದ ವೇದಬ್ರಹ್ಮ ಮೈ ಕುಮಾರ್ ಅವರು 2025-2030ನೆ ಸಾಲಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತರ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಅವರನ್ನು ಎರಡನೇ ಬಾರಿಗೆ ನೇಮಕಗೊಳಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತರ ಪರಿಷತ್ ರಾಜ್ಯಾಧ್ಯಕ್ಷ ಮಂಜುನಾಥ್ ಶಾಸ್ತ್ರಿ ಅವರು ನೇಮಕ ಪತ್ರ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಮೈ ಕುಮಾರ್ ರವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮೈ ಕುಮಾರ್ ಅವರು,ನನ್ನನ್ನು ಎರಡನೇ ಬಾರಿ ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿ ನೀಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ರಘುನಾಥ್ ಹಾಗೂ ರಾಜ್ಯಾಧ್ಯಕ್ಷ ಮಂಜುನಾಥ್ ಶಾಸ್ತ್ರಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸನಾತನ ವೈದಿಕ ಧರ್ಮ ಹಾಗೂ ಪೌರೋಹಿತ್ಯದ ಉಳಿವಿಗಾಗಿ ವಿಪ್ರ ಸಮಾಜದ ಯುವಕರು ವೇದ ಉಪನಿಷತಗಳನ್ನು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಈ ಕ್ಷೇತ್ರದಲ್ಲಿರುವ ಯುವಕರು ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ವೇದಾಭ್ಯಾಸ ಪುರೋಹಿತ ಕಲಿತ ಯುವಕರಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ ,ರಾಜ ಮಹಾರಾಜರ ಕಾಲದಿಂದಲೂ ಬ್ರಾಹ್ಮಣ ಪಂಡಿತರ ಮಾರ್ಗದರ್ಶನ ಮಹತ್ವದ್ದಾಗಿತ್ತು, ಇಂದಿನ ಸ್ಪರ್ಧಾತ್ಮಕ ತಂತ್ರಜ್ಞಾನ ಯುಗದಲ್ಲಿ ಬ್ರಾಹ್ಮಣರಿಗೆ ಉನ್ನತ ಸ್ಥಾನವಿದೆ , ಅದು ನಮ್ಮ ಪೂರ್ವಜರ ಪುಣ್ಯದ ಫಲ ಎಂದು ಮೈ ಕುಮಾರ್ ಹೇಳಿದರು.

ವೈದಿಕ ಧರ್ಮದಲ್ಲಿ ವೈಜ್ಞಾನಿಕ ಸಂದೇಶ ಪರಿಸರ ಸಂರಕ್ಷಣೆ ಪ್ರಾಣಿ ಪಕ್ಷಿಗಳ ಪೋಷಣೆ ಸೇರಿದಂತೆ ಧಾರ್ಮಿಕತೆಯ ಇತಿಹಾಸ ಉಲ್ಲೇಖವಾಗಿದ್ದು, ಪೌರೋಹಿತ್ಯವನ್ನು ಪರಿಪಾಲಿಸಿದರೆ ಕುಟುಂಬಗಳ ಅನ್ಯೋನ್ಯತೆ, ನೆಮ್ಮದಿ, ಸ್ಥಿರ ಆರೋಗ್ಯ ಸೇರಿದಂತೆ ಇತರ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.

ಮೈ ಕುಮಾರ್ ಅವರಿಗೆ ಕೆ ಎಮ್ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರವಿಚಂದ್ರ, ನವೀನ್, ರಾಕೇಶ್, ಕಾಂತಿಲಾಲ್ ಜೈನ್, ಸಂಗಮೇಶ್,ಕಿರಣ್ ಮತ್ತಿತರರು ಶುಭಕೋರಿದರು.