ಮೈಸೂರು: ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಬೇಕಾದರೇ ಗುರಿ ಮತ್ತು ಗುರುಗಳ ಅಂತಃಕರಣದ ಮಾರ್ಗ ದರ್ಶನ ಮುಖ್ಯ ಎಂದು ಅಥರ್ವ ಲೈಫ್ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ ಹೇಳಿದರು.
ಕುವೆಂಪು ನಗರದಲ್ಲಿರುವ ಅಥರ್ವ ಲೈಫ್ ಸ್ಕಿಲ್ ಫೌಂಡೇಶನ್ ಕಚೇರಿಯಲ್ಲಿ ಕರುಣೆ ಸೇವಾ ಟ್ರಸ್ಟ್ ಸಹಾಯಯೋಗದೊಂದಿಗೆ
79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
ಮಕ್ಕಳಿಗೆ ಹಮ್ಮಿಕೊಂಡಿದ್ದ ಕೈ ಬರಹ, ಚಿತ್ರಕಲಾ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜ್ಞಾನ ವಿಜ್ಞಾನ ಮತ್ತು ಆಧುನಿಕ ಡಿಜಿಟಲೀಕರಣ ಶಿಕ್ಷಣ ದೊರೆಯಬೇಕು ಎಂದು ಪುಷ್ಪಲತಾ ಹೇಳಿದರು
ಒಟ್ಟು 46 ಮಕ್ಕಳು ಬಹುಮಾನ ಪಡೆದಿದ್ದು, ಪ್ರಥಮ ಬಹುಮಾನ ರಾಘವ, ವಿಪ್ರತಾ, ಕೀರ್ತನ, ಅನನ್ಯ ಓಂಕಾರ್, ವೈಷ್ಣವಿ ಮತ್ತು ಅಮೂಲ್ಯ ಪಡೆದರು.
ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಶರತ್, ಚೇತನ್ ಗೌಡ, ಆದ್ಯ, ವಿರಾಜ್, ತನಿಷ್ಕ, ತಮ್ಮಿಕ ಮತ್ತು ಸ್ಕಂದ ತಮ್ಮದಾಗಿಸಿಕೊಂಡರು.
ಈ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆದಿದ್ದು, ಅತಿಥಿಗಳು ಹಾಗೂ ಪೋಷಕರಿಂದ ಭಾರಿ ಮೆಚ್ಚುಗೆ ಪಡೆದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ
ರೇಖಾ ಶ್ರೀನಿವಾಸ್,ಡಾ. ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ರಾಧಾ ರಾಜರತ್ನ, ಕೈಬರಹ ಶಿಕ್ಷಕಿ ಮೇನಕ, ಧ್ಯಾನ ಹಾಗೂ ಯೋಗ ಶಿಕ್ಷಕರಾದ ಕೃಷ್ಣ ಕುಮಾರ್ ಎಸ್,
ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಮತ್ತಿತರರು ಹಾಜರಿದ್ದರು.
