ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯ ಕೊಂ*ದ ಪಾಪಿ ಪತಿ

Spread the love

ಮೈಸೂರು: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಹಣ ನೀಡದ ಪತ್ನಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗರದ ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಗಾಯಿತ್ರಿ ಕೊಲೆಯಾದ ನತದೃಷ್ಟೆ.ಈಗ ಪತಿ ಪಾಪಣ್ಣ ಎಣಿಸುತ್ತಿದ್ದಾನೆ.

ಈ ಹಿಂದೆ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲ ಮಾಡಿಕೊಂಡಿದ್ದ,ಜೊತೆಗೆ ಕುಡಿತದ ಚಟ ಅಂಟಿಸಿಕೊಂಡಿದ್ದ.

ಕೆಲಸವಿಲ್ಲದೆ ಅಲೆಯುತ್ತಿದ್ದ ಪಾಪಣ್ಣ ಸದಾ ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನ ಪೀಡಿಸುತ್ತಿದ್ದ.ಪಾಪಣ್ಣನ ಮಗಳ ಮದುವೆಯನ್ನ ಇಬ್ಬರು ಗಂಡು ಮಕ್ಕಳು ಸೇರಿ ಮಾಡಿದ್ದರು.ಇದಕ್ಕಾಗಿ ಮಾಡಿದ್ದ ಸಾಲ ಗಂಡು ಮಕ್ಕಳೇ ತೀರಿಸುತ್ತಿದ್ದರು.ಆದರೂ ಕುಡಿತಕ್ಕೆ ಮಾಡಿದ್ದ ಸಾಲ ತೀರಿಸಲು ಆಗಾಗ ಹಣಕ್ಕಾಗಿ ಪತ್ನಿಯನ್ನ ಹಾಗೂ ಮಕ್ಕಳನ್ನು ಪಾಪಣ್ಣ ಪೀಡಿಸುತ್ತಿದ್ದ.

ಸಾಹುಕಾರ ಹುಂಡಿಯಲ್ಲಿ ಜಮೀನು ಇತ್ತು.ಜಮೀನು ಮಾರಾಟ ಮಾಡಿ ಹಣ ಕೊಡುವಂತೆ ಪಟ್ಟು ಹಿಡಿದಿದ್ದ.ಈ ವಿಚಾರದಲ್ಲಿ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು.ಇದೇ ವಿಚಾರದಲ್ಲಿ ನಿನ್ನೆಯೂ ಜಗಳ ಮಾಡಿದ ಪಾಪಣ್ಣ ಮನೆಯಲ್ಲಿ ಮಕ್ಕಳು ಇಲ್ಲದಿದ್ದಾಗ ಪತ್ನಿ ಗಾಯಿತ್ರಿಯನ್ನ ಮೊಚ್ಚಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ.

ನಂತರ ಪಾಪಣ್ಣ ಗಾಬರಿಯಿಂದ ಹೊರಗಿನಿಂದ ಬೀಗ ಹಾಕುತ್ತಿದ್ದ ದೃಶ್ಯ ಮಗ ನೋಡಿದ್ದಾರೆ,ಕೈಗಳು ರಕ್ತಮಯವಾಗಿರುವುದನ್ನ ಗಮನಿಸಿ ಬಾಗಿಲು ತೆರೆದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಕಂಡುಬಂದಿದ್ದಾರೆ.

ತಾಯಿ ಗಾಯಿತ್ರಿಯನ್ನ ತಂದೆ ಕೊಲೆ ಮಾಡಿದ್ದಾನೆಂದು ಪುತ್ರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯನಗರ ಪೊಲೀಸರು ಪಾಪಣ್ಣ ನನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.