ಮೈಸೂರು: ಈ ಬಾರಿಯ ದಸರಾ ಮಹೋತ್ಸವಕ್ಕೆ ಆನೆಗೊಂದಿಗೆ ಅರಮನೆಗೆ ಆಗಮಿಸಿರುವ ಕಾವಾಡಿಗರು ಮತ್ತು ಮಾವುತರೊಂದಿಗೆ ಶ್ರೀ ದುರ್ಗಾ ಫೌಂಡೇಶನ್
ನವರು ರಾಕು ಕಟ್ಟಿ ರಕ್ಷಾಬಂಧನ ಆಚರಿಸಿ ಮಾದರಿಯಾಗಿದ್ದಾರೆ.
ಅರಮನೆ ಆವರಣದಲ್ಲಿ ಕಾವಾಡಿಗರು ಮತ್ತು ಮಾವುತರಿಗೆ ಆರತಿ ಬೆಳಗಿ, ತಿಲಕ ಇಟ್ಟು ಶ್ರಾವಣ ಮಾಸದ ಲಡ್ಡು ಪ್ರಸಾದ ವಿತರಿಸಿ, ರಕ್ಷೆಯನ್ನು ಕಟ್ಟುವ ಮೂಲಕ ಶ್ರೀ ದುರ್ಗಾ ಫೌಂಡೇಶನ್ ಮಹಿಳೆಯರು ವಿಶೇಷವಾಗಿ ರಕ್ಷಾಬಂಧ ಆಚರಿಸಿದರು.
ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ,
ದಸರಾಗೆ ಮೈಸೂರಿಗೆ ಆಗಮಿಸಿರುವ ಸಹೋದರರ ಸಮಾನರಾದ ಮಾವುತರು ಹಾಗೂ ಕಾವಾಡಿಗಳಿಗೆ ರಕ್ಷೆ ಕಟ್ಟುವ ಸೌಭಾಗ್ಯ ನಮ್ಮದಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಶ್ರಾವಣ ಬಂದರೆ ಹಬ್ಬಗಳ ಸಾಲು ಆರಂಭ, ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನ್ ಹಬ್ಬಕ್ಕೆ ವಿಶೇಷ ಮಹತ್ವವಿದೆ, ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆ ಕೋರಿ ರಕ್ಷಾಬಂಧನ ಕಟ್ಟುವ ಭಾವನಾತ್ಮಕ ಮತ್ತು ಪವಿತ್ರ
ಹಬ್ಬವಿದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಎಫ್ ಪ್ರಭು ಅವರಿಗೂ ಮಹಿಳೆಯರು ರಕ್ಷೆಯನ್ನು ಕಟ್ಟಿದರು
ಕಾರ್ಯಕ್ರಮದಲ್ಲಿ ಖುಷಿ ವಿನು, ಕಾವ್ಯ,ಜಿ ರಾಘವೇಂದ್ರ, ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.