ಧರ್ಮಸ್ಥಳದ ಬಗ್ಗೆ ಅಪಪ್ರಚಾರ;ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ

Spread the love

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಮೈಸೂರಿನಲ್ಲಿ ಸಹಿ ಸಂಗ್ರಹ ಚಳವಳಿ ಪ್ರಾರಂಭಿಸಲಾಯಿತು.

ಧರ್ಮಸ್ಥಳದ ವಿಚಾರವಾಗಿ ಅನೇಕ ಪ್ರಕರಣಗಳನ್ನು ಧರ್ಮಾಧಿಕಾರಿ ಹಾಗೂ ಅವರ ಕುಟುಂಬವನ್ನು ತಳುಕು ಹಾಕುತ್ತಾ ಅಪ ಪ್ರಚಾರ ಮಾಡಲಾಗುತ್ತಿದೆ.

ಈ ಅಪಪ್ರಚಾರವನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿ ವತಿಯಿಂದ ಮೈಸೂರಿನ ಚಿಕ್ಕ ಗಡಿಯಾರದ ವೃತ್ತದಲ್ಲಿ ಇಂದಿನಿಂದ ಸಹಿ ಸಂಗ್ರಹ ಚಳವಳಿಯನ್ನು ಆರಂಭಿಸಲಾಗಿದೆ.

ಈ ಚಳವಳಿಯನ್ನು ಹಿಂದೂ ಮುಖಂಡರಾದ ಮೈ.ಕಾ. ಪ್ರೇಮ್ ಕುಮಾರ್, ಸಂಜಯ್, ರಾಕೇಶ್ ಭಟ್, ಸಚಿನ್ ನಾಯಕ್, ಶ್ರೀಧರ್, ಚಿಕ್ಕವೆಂಕಟು, ಕುಮಾರ್, ಅನಿಲ್, ಪ್ರಮೋದ್ ಸೇರಿದಂತೆ ಹಲವರು ಆಯೋಜಿಸಿದ್ದಾರೆ.

ಇಂದಿನ ಸಹಿ ಸಂಗ್ರಹ ಚಳವಳಿಗೆ ಮಾಜಿ ಮಹಾಪೌರರಾದ ಶಿವಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವಕೀಲರಾದ ಸಿ.ವಿ. ಕೇಶವಮೂರ್ತಿ ಸೇರಿದಂತೆ ಸಾವಿರಾರು ಜನ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದರು.

ಮಾಧ್ಯಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಅಂಡ್ ರನ್ ರೀತಿ ಆಪಾದನೆ ಮಾಡಿ ಕೆಲವರು ಅಜ್ಞಾತ ಸ್ಥಳದಲ್ಲಿ ಕೂರುತ್ತಿದ್ದಾರೆ ಕಳೆದ ದಶಕದಿಂದ ಸೌಜನ್ಯ ಹತ್ಯೆ ಪ್ರಕರಣವಾಗಿ ಅನೇಕ ತನಿಖೆಗಳು ನಡೆದಿದೆ, ಆದರೆ ಎಲ್ಲಿಯೂ ಧರ್ಮಾ ಧಿಕಾರಿಗಳು ಹಾಗೂ ಅವರ ಕುಟುಂಬದ ಯಾರೊಬ್ಬರ ಪಾತ್ರದ ಬಗ್ಗೆ ಸಾಕ್ಷಿ ಲಭಿಸಿಲ್ಲ. ಹಾಗಿದ್ದಾರೂ ಹೊಸ ಹೊಸ ಆರೋಪಗಳನ್ನು ಸೃಷ್ಟಿಸಿ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಆಸ್ತಿಕರ ಭಾವನೆಗೆ ನೋವುಂಟಾಗಿದೆ, ಮೂಲಭೂತವಾದಿ ಮತೀಯ ಸಂಘಟನೆ ಎಸ್ ಡಿ ಪಿ ಐ ಪ್ರಕರಣದಲ್ಲಿ ತೆರೆಮರೆಯ ಹಿಂದೆ ಷಡ್ಯಂತ್ರ ರೂಪಿಸಿದೆ ಎಂದು ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯವರು ಗಂಭೀರ ಆರೋಪ ಮಾಡಿದರು.

ಈ ಹಿಂದೆ ಶ್ರೀರಾಮಚಂದ್ರಾಪುರ ಮಠ, ಪೇಜಾವರ ಮಠ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶಬರಿಮಲೆ ಸೇರಿದಂತೆ ಅನೇಕ ಆಸ್ತಿಕರ ನಂಬಿಕೆಯ ಕ್ಷೇತ್ರಗಳ ಮೇಲೆ ಅಪಪ್ರಚಾರ ನಡೆಸಲಾಗಿದೆ. ಈಗ ಧರ್ಮಸ್ಥಳದ ಮೇಲೆ ಮುಗಿ ಬೀಳಲಾಗುತ್ತಿದೆ ಈ ಅಪಪ್ರಚಾರವನ್ನು ಕೂಡಲೇ ತಡೆಯಬೇಕು ಎಂದು ಹಿಂದೂ ಪುಣ್ಯಕ್ಷೇತ್ರಗಳ ಸಂರಕ್ಷಣಾ ಸಮಿತಿಯವರು ಆಗ್ರಹಿಸಿದರು.