ಮೈಸೂರು: ಮೈಸೂರಿನ ಲಯನ್ಸ್ ಅಂಬಾಸಿಡರ್ ಸಂಸ್ಥೆ ಮತ್ತು ಮಾಜಿ ಸಶಸ್ತ್ರ ಸೈನಿಕರ ಸಂಘದ ಸದಸ್ಯರು ಭಾನುವಾರ ಶ್ರಮಾದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಯುದ್ಧ ಸ್ಮಾರಕ ಸ್ತಂಭದ ಆವರಣದಲ್ಲಿ ಗಿಡಗಂಟೆಗಳನ್ನು ಸ್ವಚ್ಚಗೊಳಿಸಿ,ಕಾಗದ,ಕಸ,ಕಡ್ಡಿಗಳನ್ಯ ತೆಗೆಯುವ ಮೂಲಕ ಶ್ರಮದಾನ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷ ಲಯನ್ ಎಚ್ ಸಿ ಕಾಂತರಾಜು,ಸಶಸ್ತ್ರ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ ಬಿದ್ದಪ್ಪ ಹಾಗೂ ಲಯನ್ ಜಿಲ್ಲಾ ಅಧ್ಯಕ್ಶರಾದ ಮಕಾಳ ಶಿವಕುಮಾರ್, ಟಿ.ಎಚ್ ವೆಂಕಟೇಶ್, ಡಾ.ಅರ್.ಡಿ. ಕುಮಾರ್,ಸಿ.ಆರ್ .ದಿನೇಶ್,ವಿ.ಶ್ರೀಧರ್, ಎಚ್ ಕೆ ಪ್ರಸನ್ನ ,ಮಲ್ಲಿಕಾರ್ಜುನಪ್ಪ,
ರಾಮಚಂದ್ರ, ಪುಟ್ಟಸ್ವಾಮಿ,ನಾಗರಾಜು, ಯಶೋದಮ್ಮ ,ಕೆ ಟಿ ವಿಷ್ಣು ಡಾ.ಕಿಶೋರ್, ಮನು, ರವಿ, ಶಿವರುದ್ರಯ್ಯ, ರವಿಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.