ವಿಪ್ರ ಸಮಾಜದವರು ಕಠಿಣ ಸವಾಲು ಎದುರಿಸುತ್ತಿದ್ದಾರೆ: ಪಾವಗಡ ಪ್ರಕಾಶ್ ರಾವ್

ಮೈಸೂರು: ವಿಪ್ರ ಸಮಾಜದವರು ಇಂದು ಬಹಳ ಕಷ್ಟ ಮತ್ತು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ವಿದ್ಯಾಶಾರದ ಪ್ರವಚನ ಚಕ್ರವರ್ತಿ ಡಾಕ್ಟರ್ ಶ್ರೀ ಪಾವಗಡ ಪ್ರಕಾಶ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರು ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಏಕಿಕೃತ ಪರಷತ್ತಿನ ಕರ್ನಾಟಕದ ರಾಜ್ಯಾಧ್ಯಕ್ಷರೂ ಆದ ಎನ್.ಎಂ.ನವೀನ್ ಕುಮಾರ್ ಅವರ ಗೃಹ ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರು ಮಾತನಾಡಿದರು.

ವಿಪ್ರ ಸಮಾಜದವರು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ,
ಬಹಳಷ್ಟು ಸಮಸ್ಯೆಗಳಿಗೆ ವಿಪ್ರ ಮುಖಂಡರು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಶ್ರೀ ಪ್ರಕಾಶ್ ರಾವ್ ರವರನ್ನು ಪೂರ್ಣಕುಂಭ ಸ್ವಾಗತ ದೊಂದಿಗೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪ್ರಕಾಶ್ ರಾವ್ ಅವರಿಗೆ ಎನ್ ಎಂ ನವೀನ್ ಕುಮಾರ್ ಅವರು ಅಭಿನಂದಿಸಿ ಗೌರವ ಸಲ್ಲಿಸಿದರು.

ನಂತರ ಮಾತನಾಡಿದ ನವೀನ್ ಕುಮಾರ್ ಅವರು,ಕರ್ನಾಟಕಾದ್ಯಂತ,ವಿಶೇಷವಾಗಿ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯವನ್ನು ಸಂಘಟಿಸಿ ಅವರ ಹಕ್ಕುಗಳಿಗೆ ಹೋರಾಡಲು ಪಣತೊಟ್ಟಿದೆನೆ ಎಂದು ತಿಳಿಸಿದರು.

ಈ ವೇಳೆ ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ವಿಧ್ವಾನ್ ವೆಂಕಟಕೃಷ್ಣ ಸಾಮವೇದಿ,ವಿಪ್ರ ಮುಖಂಡರಾದ ಆರ್.ಎಸ್ ಸತ್ಯನಾರಾಯಣ,
ಎಸ್.ಬಿ.ವಾಸುದೇವ ಮೂರ್ತಿ,
ಪಾರ್ಥಸಾರಥಿ,ರಾಜಕುಮಾರ್,
ವಕೀಲರಾದ ಜಯಶ್ರೀ,ಸುರೇಶ್,
ಜಯರಾಮ್,ಮುರಳಿ, ಗದಾದರ್,ಪ್ರವೀಣ್ ಕುಮಾರ್ ಮತ್ತುತರರು ಭಾಗವಹಿಸಿದ್ದರು.