ಬೆಂಗಳೂರು: ಫಿಟ್ನೆಸ್ ಸೆಂಟರ್ ವೊಂದರ ರಿಸೆಪ್ಷನಿಸ್ಟ್ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಕಡಬಗೆರೆಯಲ್ಲಿ ಈ ಘಟನೆ ನಡೆದಿದ್ದು, ರಕ್ಷಿತಾ (20) ಮೃತ ರಿಸೆಪ್ಷನಿಸ್ಟ್
ಕಡಬಗೆರೆಯಲ್ಲಿರುವ ಜುನಿಫರ್ ಫಿಟ್ನೆಸ್ ಸೆಂಟರ್ ನಲ್ಲಿ ಈಕೆ ರಿಸೆಪ್ಷನಿಸ್ಟ್ ಆಗು ಕೆಲಸ ಮಾಡುತ್ತಿದ್ದಳು.
ಮಂಗಳವಾರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಳು.ಅದೇನಾಯಿತು ಮಧ್ಯಾಹ್ನ ಫಿಟ್ನೆಸ್ ಸೆಂಟರ್ ನ ಮೂರನೇ ಮಹಡಿಗೆ ಹೋಗಿ ಅಲ್ಲಿಂದ ಹಾರಿಬಿಟ್ಟಿದ್ದಾಳೆ.
ರಕ್ಷಿತಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
