ಮೈಸೂರು: ಯುವತಿ ಹೆಸರಲ್ಲಿ ಎರಡು ಫೇಕ್ ಇನ್ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಸಂದೇಶ ಮತ್ತು ಚಿತ್ರಗಳು, ಖಾಸಗಿ ವಿಡಿಯೋ ಪೋಸ್ಟ್ ಮಾಡಿದ ಯುವಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೊಂದ 21 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದು,ಯಶ್ವಂತ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಈತ ಒಂದು ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಫೋಟೋ ಹಾಕಿ ಅಶ್ಲೀಲ ಸಂದೇಶ್ ಪೋಸ್ಟ್ ಮಾಡಿದ್ದಾನೆ.ಮತ್ತೊಂದ ಫೇಕ್ ಇನ್ಸ್ಟಾಗ್ರಾಂ ನಲ್ಲಿ ಯುವತಿಯ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ ತನ್ನ ಖಾಸಗಿ ಜೀವನಕ್ಕೆ ಧಕ್ಕೆ ತಂದಿದ್ದಾನೆಂದು ನೊಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.