ಮೈಸೂರು: ಬೋಗಾದಿಯ ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ತ್ರಿಮತಸ್ಥ ಬ್ರಾಹ್ಮಣರಿಗಾಗಿ ಉಚಿತ ಸಾಮೂಹಿಕ ಯಜುರುಪಾಕರ್ಮವನ್ನು ಆ 9 ರಂದು
ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ಹವ್ಯಕ ಮಹಾಮಂಡಲದ ವತಿಯಿಂದ ಉಚಿತ ಸಾಮೂಹಿಕ ಯಜುರುಪಾಕರ್ಮವನ್ನು ಆಯೋಜಿಸಲಾಗಿದೆ.
ಇದರಲ್ಲಿ ಪಾಲ್ಗೊಳ್ಳಲು ಆಸಕ್ತಿ ಯುಳ್ಳವರು ಹೆಸರು ನೋಂದಾಯಿಸಿಕೊಳ್ಳಲು ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ 9916221184, ಕೋಶಾಧಿಕಾರಿ ಪಡಾರು ರಾಮಕೃಷ್ಣ ಭಟ್ 9448208368 ಅವರನ್ನು ಕರೆ ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬರುವಾಗ ಉದ್ಧರಣೆ-ಪಂಚಪಾತ್ರೆ, ಚಾಪೆ, ಪೂಜಾ ಸಾಮಗ್ರಿಗಳು(ಹೂವು, ಹಣ್ಣು, ವೀಳ್ಯದೆಲೆ, ಅಡಿಕೆ, ಗಂಧದಕಡ್ಡಿ), ಜನಿವಾರ, ದಾನಾದಿಗಳಿಗೆ ಸಾಮಾಗ್ರಿಗಳನ್ನು ತರುಬೇಕು.
ಎಂದು ರಾಕೇಶ್ ಭಟ್ ತಿಳಿಸಿದ್ದಾರೆ.