ಮೈಸೂರಿಂದ ಶೃಂಗೇರಿಗೆ‌ ಸ್ಲೀಪಿಂಗ್ ಕೋಚ್ ಬಸ್ ಗೆ ಚಾಲನೆ

ಮೈಸೂರು: ಮೈಸೂರಿಂದ ಶೃಂಗೇರಿಗೆ ಸುನಿತ್ ಕಿಸನ್ ರವರ ಮಾಲೀಕತ್ವದ
ಸ್ಲೀಪಿಂಗ್ ಕೋಚ್ ಬಸ್ ಗೆ ಚಾಲನೆ ನೀಡಲಾಯಿತು

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದ ಮುಂಭಾಗ ಮೈಸೂರು ನಗರದ ಮೊದಲ ಸ್ಲೀಪಿಂಗ್ ಕೋಚ್ ಬಸ್ ಗೆ
ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಅವರು ಇಳೈ ಆಳ್ವಾರ್ ಸ್ವಾಮೀಜಿ ಅವರ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಿ ಟಿ ಪ್ರಕಾಶ್, ಅನಿಲ್ ಕುಮಾರ್, ಹರಿಹರ ಪುರ ಮಠದ ಶ್ರೀನಿವಾಸ್, ಅಜಯ್ ಶಾಸ್ತ್ರಿ, ರಂಗನಾಥ್, ಮಧುರಾವ್, ವಿ ಎನ್ ಕೃಷ್ಣ,
ಮತ್ತಿತರರು ಹಾಜರಿದ್ದರು.