ಎನ್.ಎಂ.ನವೀನ್ ಕುಮಾರ್ ಗೃಹ ಕಚೇರಿಗೆಎಸ್.ರಘುನಾಥ್ ಭೇಟಿ

ಮೈಸೂರು, ಆ.2: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾದ ಎಸ್.ರಘುನಾಥ್ ಅವರು ಮೈಸೂರಿಗೆ ಭೇಟಿ ನೀಡಿದ್ದರು.

ರಾಜ್ಯ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮಿಕಾಂತ್, ಮತ್ತು ರಾಜ್ಯ ಉಪಾಧ್ಯಕ್ಷರುಗಳಾದ ಎಸ್. ಎಸ್. ಪ್ರಸಾದ್ , ದಿಲೀಪ್, ರಾಜಶೇಖರ್, ರಥಯಾತ್ರೆ ಸುರೇಶ್, ಜಂಟಿ ಕಾರ್ಯದರ್ಶಿಗಳಾದ ತಿರುಮಲೇಶ್, ನಾಗೇಂದ್ರ ಜೋಯಿಸ್ ಕೂಡಾ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಎನ್.ಎಂ.ನವೀನ್ ಕುಮಾರ್ ಅವರ ಗೃಹ ಕಚೇರಿಗೆ ಭೇಟಿ ನೀಡಿ ಹಲವಾರು ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಿದರು.

ಈ‌ ವೇಳೆ‌ ರಘುನಾಥ್ ಸೇರಿದಂತೆ ಎಲ್ಲರನ್ನೂ ನವೀನ್ ಕುಮಾರ್ ಅವರು ಗೌರವಿಸಿ ಸನ್ಮಾನಿಸಿದರು.