ಸ್ವಚ್ಛತೆ ಜತೆ ಪರಿಸರ ಸ್ನೇಹಿ ಗಿಡಗಳ ನೆಟ್ಟುಬಸವಣ್ಣ ಅವರ ಜನುಮದಿನ ಆಚರಣೆ

Spread the love

ಮೈಸೂರು: ಬಿಜೆಪಿ ರಾಮಕೃಷ್ಣ ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಪರಿಸರ ಸಂರಕ್ಷಕರೂ ಆದ ಬಸವಣ್ಣ ಅವರ 73ನೇ ಜನ್ಮದಿನವನ್ನು ರಾಮಕೃಷ್ಣನಗರದ ಉದ್ಯಾನವನದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಪರಿಸರ ಸ್ನೇಹಿ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.

ಪ್ರಧಾನಮಂತ್ರಿಯಾಗಿ 11 ವರ್ಷ ಪೂರೈಸಿರುವ ನರೇಂದ್ರ ಮೋದಿಯವರಿಗೆ ಜನ್ಮದಿನದ ಸೇವಾ ಕಾರ್ಯವನ್ನು ಅರ್ಪಿಸಲಾಯಿತು.

ಬಸವಣ್ಣನವರು 1991-96ರ ನಡುವೆ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ರಾಮಕೃಷ್ಣ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, ಜಯಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ವಾರ್ಡಿನ ನಾಗರಿಕ ಸಮಿತಿಯ ಸದಸ್ಯರಾಗಿ, ಐ ಬ್ಲಾಕ್ ಗಣಪತಿ ದೇವಸ್ಥಾನದ ಗೌರವ ಕಾರ್ಯದರ್ಶಿಯಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಈ ಭಾಗದಲ್ಲಿ ಬಸ್ ತಂಗುದಾಣ, ಉದ್ಯಾನವನಗಳ ಅಭಿವೃದ್ದಿ, ಸಾವಿರಾರು ಗಿಡಗಳನ್ನು ನೆಟ್ಟು ಮರವಾಗುವ ತನಕ ಪೋಷಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ. ಮಾದೇಗೌಡರ ಜೊತೆಯ ಒಡನಾಟದಿಂದ ಅನೇಕರಿಗೆ ವಸತಿ ರಹಿತರಿಗೆ ನಿವೇಶನ ಕೊಡಿಸುವುದರ ಜೊತೆ ನಾಗರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ,ಹಾಗಾಗಿ ಸ್ಥಳೀಯರು ಬಸವಣ್ಣ ಅವರ ಹುಟ್ಟುಹಬ್ಬವನ್ನು ಗಿಡಗಳನ್ನು ನೆಟ್ಟು, ಸಿಹಿ ವಿತರಿಸಿ ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ರಾಕೇಶ್ ಭಟ್, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಅಂಬಾಡಿ ಮಾಧವ್, ಸ್ವಾಮಿಗೌಡ, ನಾಗೇಶ್ ಮೂರ್ತಿ, ಹಿರಿಯಣ್ಣ, ಬಾಲಕೃಷ್ಣ ಭಟ್, ಶಿವು ಪಟೇಲ್, ರವಿ ನಾಯಕಂಡ, ರಾಚಪ್ಪಾಜೀ, ತ್ಯಾಗರಾಜ್, ಶ್ರೀನಿವಾಸ್ ಪ್ರಸಾದ್, ರಾಘವೇಂದ್ರ, ರಂಗೇಶ್, ಮಹೇಶ್, ಚಂದ್ರ ಶೇಖರಸ್ವಾಮಿ, ರಾಜೇಶ್, ಮಂಜು, ಯಶೋಧ, ಪಂಕಜವಲ್ಲಿ, ಚಂದ್ರಕಾಂತ್, ಸತೀಶ್, ರೇಚಣ್ಣ, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.