ವಿಧವೆ ಬಾಳಿಗಿಲ್ಲ ಆಸರೆಯ ಆಶ್ರಯ: ಮಹಿಳಾ ಆಯೋಗ ಕಣ್ತೆರೆಯುವುದೇ?

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದ ತಾಲ್ಲೋಕೊಂದರಲ್ಲಿ ವಿಧವೆಯೊಬ್ವರು ಸರ್ಕಾರ ಕೊಟ್ಟ ನಿವೇಶನದಲ್ಲಿ ಮನೆ ನಿರ್ಮಿಸಲು ಪರದಾಡಿ ಏನೂ ಮಾಡಲು ತೋಚದೆ ಸಾಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆಕೆ ಎಲ್ಲ ಕಡೆ ತನ್ನ ಮನದಾಳದ ದೂರಿನ ಅರ್ಜಿ ನೀಡಿದರೂ ಅದಿಕಾರಿಗಳು ಮಾತ್ರ ಕ್ಯಾರೆ ಎನ್ನದ ಕಾರಣ ಸಾಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೋಕಿನ ಲೊಕ್ಕನಹಳ್ಳಿ ಗ್ರಾಮದ ಲೇ ಸುರೇಶ್ ಎಂಬುವವರ ಪತ್ನಿ ಮಣಿ ಎಂಬಾಕೆ ಈಗ ದಿಕ್ಕು ಕಾಣದೆ ಆತ್ಮಹತ್ಯೆ ದಾರಿ ಎಂದು‌ ಕೊಂಡಿದ್ದಾರೆ.

ಈಕೆ ರಾಜೀವ್ ಗಾಂದಿ ವಸತಿ ಯೋಜನೆಯಡಿ ನಿವೇಶನವೊಂದರ ಹಕ್ಕು ಪತ್ರವನ್ನು ಪಂಚಾಯ್ತಿ ನೀಡಿದೆ. ಆದರೆ ಮೊದಲ ಹಂತದಲ್ಲಿ ತಳಪಾಯ ತೆಗೆದು ಬೇಸ್ ಮಟ್ಟ ಮಾಡಿ ಬಿಲ್ ಪಡೆಯಲು ಸಾಹಸ ಕೂಡ ಮಾಡುತ್ತಿಧ್ದಾರೆ.

ಆದರೆ ಬಿಲ್ ಅಪ್ರೂವಲ್ ಮಾಡಸಿಕೊಳ್ಳಲಾಗದೆ ಪೂರ್ಣ ಮನೆಯನ್ನು ನಿರ್ಮಿಸಿಕೊಳ್ಳಲಾಗದೆ ತನ್ನ ಕೈ ತಾನೆ ಹಿಚುಕುಗೊಂಡು ಅದಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾಳೆ.

ಈಕೆ ಇರೊ ಜಾಗದಲ್ಲಿನ ಬೀದಿ ಅತೀ ಚಿಕ್ಕದು, ಮನೆ ನಿರ್ಮಾಣ ಮಾಡಲು ಸಾಮಗ್ರಿಗಳನ್ನು ತಂದಿಡಲು ಸಾಗಿಸಲು ಸೂಕ್ತ ಜಾಗವಿಲ್ಲ,ಮತ್ತೊಂದು ಸರ್ಕಾರಿ ರಸ್ತೆ ಪ್ರಭಾವಿಗಳ ಪಾಲು ಇದರಿಂದ ನೊಂದು ದಿಕ್ಕು ಕಾಣದೆ ಪಂಚಾಯತ್ ಅದಿಕಾರಿಗಳು, ತಾಲ್ಲೋಕು ಕಾರ್ಯ ನಿರ್ವಹಣಾದಿಕಾರಿಗಳು,ಜಿಪಂ.ಅದಿಕಾರಿಗಳು, ಉಪವಿಭಾಗಾದಿಕಾರಿಗಳು,
ಜಿಲ್ಲಾದಿಕಾರಿಗಳು ಹೀಗೆ ಹಂತ ಹಂತವಾಗಿ ಪತ್ರವ್ಯವಹಾರ ಮಾಡಿದ್ದಾರೆ.

ಉಪವಿಭಾಗಾದಿಕಾರಿಯೊಬ್ಬರು ಸೌಜನ್ಯಯುತವಾಗಿ ಸಮಸ್ಯೆ ಕೇಳಿ ಪ್ರಾಥಮಿಕ ಹಂತದಲ್ಲಿ ಸ್ಪಂದಿಸಿದ್ದು ಬಿಟ್ಟರೆ ಉಳಿದ ಯಾವುದೇ ಅದಿಕಾರಿಗಳು ಕ್ಯಾರೆ ಎಂದಿಲ್ಲ.

ಇತ್ತೀಚೆಗೆ ಮಹಿಳಾ ಆಯೋಗದ ಅದ್ಯಕ್ಷರು ಬಂದಿದ್ದಾಗ ಎಲ್ಲಿ ದೂರು ಸಲ್ಲಿಸುತ್ತಾಳೊ ಎಂಬ ಭಯದಿಂದ ಭೂಮಾಪನ ಇಲಾಖೆಯವರು ನಾಮಾಕಾವಸ್ಥೆ ಸರ್ವೆ ಮಾಡಿ ಹೋದವರು ಮತ್ತೆ ಇತ್ತ ತಿರುಗಿ ನೋಡಲಿಲ್ಲ.

ಮನೆ ನಿರ್ಮಿಸಲು ಇಷ್ಟು ತೊಂದರೆ ಕೊಡುತ್ತಾರೆ ಅಂತ ಗೊತ್ತಿದ್ದರೆ ನಾನು ಮನೆ ಕಟ್ಟುವ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ನೊಂದು ನುಡಿಯುತ್ತಾರೆ ಆಕೆ.

ಅಳತೆಯಲ್ಲಿನ ಜಾಗ ನಮ್ಮ ಮಾವ ಮಾರಿದ್ದಾರೆ ಎಂದು ಹೇಳುತ್ತಿಧ್ದು ಅದು ಸರ್ಕಾರಿ ಜಾಗ ನಮ್ಮ‌ಮಾವ ಮಾರಲು ಹೇಗೆ ಸಾದ್ಯ.? ಹಾಗಾಗಿದ್ದರೆ ಅವರ ಮೇಲೂ ಕ್ರಮವಹಿಸಲಿ ಮನೆಗೆ ಗಂಡಸ್ಸಿನ ಆಸರೆ ಇಲ್ಲದ್ದರಿಂದ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಿ ಅಂತ ಹಿಂಬರಹ ನೀಡ್ತಾರೆ ಎನ್ನುತ್ತಾರೆ ದೂರುದಾರೆ ಮಣಿ.

ಇತ್ತ ಅವರಿಗೆ ಕೊಡಬೇಕಾದ ಹಿಂಬರಹ ನಾವು ಕೊಟ್ಟಾಗಿದೆ,ನಮ್ಮನ್ನ ಏನು ಕೇಳಬೇಡಿ.ತಾಲ್ಲೋಕು ಕಾರ್ಯನಿರ್ವಾಹಕ ಅದಿಕಾರಿಗಳನ್ನ ಕೇಳಿಕೊಳ್ಳಿ ಎಂಬ ಉದಾಸೀನ ಉತ್ತರ ಮಾದ್ಯಮದವರಿಗೆ ನೀಡುತ್ತಾರೆ.

ಇವರು ಕೊಡುವ ಉತ್ತರ ನೋಡಿದರೆ ಸರ್ಕಾರಿ ಜಾಗವನ್ನು ನಕಲಿ ದಾಖಲೆ ತಿದ್ದಿ ಪ್ರಭಾವಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರಬಹುದಾ ಎಂಬ ಸಂಶಯ ಕಾಡುತ್ತಿದೆ.

ರಾಜ್ಯದ ಮುಖ್ಯಮಂತ್ರಿಗಳು ರಾಜೀವ್ ಗಾಂದಿ ವಸತಿ ಯೋಜನೆಯಡಿ ನೀಡಲಾದ ಜಾಗಕ್ಕೆ ಮನೆ ನಿರ್ಮಿಸಲು ಅದಿಕಾರಿಗಳೆ ಅಡ್ಡಗಾಲು ಆಗಿರುವಾಗ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ ಈಕೆಯ ಸ್ಥಿತಿ.

ದೂರುದಾರೆ ಆರೋಪಿಸಿರುವಂತೆ ಸರ್ಕಾರದ ನಿಯಮದಂತೆ ಅಳತೆ ಮಾಡಿಸಿ ಮನೆ ಕಟ್ಟಲು ಅವಕಾಶ ಮಾಡಿಕೊಡುವುದರ ಜೊತೆಗೆ ಲೋಪ ಮಾಡಿದ್ದರೆ ಅದಿಕಾರಿಗಳ ಮೇಲೆ ಕ್ರಮ ಜರುಗಿಸಲಿ,ನನಗೆ ಆಸರೆಯ ಆಶ್ರಯ ನೀಡಲು ಈ ವಿಧವೆ ಮಹಿಳಾ ಆಯೋಗವೆ ಸಹಕಾರಿಯಾಗಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.ಏನಾಗುತ್ತದೊ ಮಣಿಗೆ ಮನೆ ಸಿಗುತ್ತದೊ ಇಲ್ಲವೊ ಕಾದು ನೋಡಬೇಕಿದೆ.