ಸೆ. 21 ರಂದು ಡಾ. ವಿಷ್ಣುವರ್ಧನ್ ಚಿತ್ರಗಳ ಕರೋಕೆ ಗಾಯನ ಕಾರ್ಯಕ್ರಮ

ಮೈಸೂರು: ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ 74 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕರೋಕೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾಕ್ಟರ್ ವಿಷ್ಣುವರ್ಧನ್ ಅಭಿನಯಿಸಿರುವ‌ ಚಿತ್ರಗಳ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಎ ಕಾಂತರಾಜು ರವರ ಸಾರಥ್ಯದಲ್ಲಿ ಮೈಸೂರು ಪುರ ಭವನದಲ್ಲಿ ಸೆಪ್ಟೆಂಬರ್ 21ರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಸಂಸ್ಥಾಪಕ ಕಾಂತರಾಜು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೇಲುಕೋಟೆ ವೆಂಗಿ ಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ವಹಿಸುವರು.

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ರೇಖಾ ಅರುಣ್, ಹೃದಯ ತಜ್ಞ ಡಾ. ಮಂಜುನಾಥ್, ಮನೋಶಾಸ್ತ್ರಜ್ಞೆ ಡಾ|| ರೇಖಾ ಮನಃಶಾಂತಿ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.