ಮೈಸೂರು: ಮೈಸೂರಿನ ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜು ವತಿಯಿಂದ ಶ್ರೀ ಗುರಿಕಾರ್ ಮರಿ ಮಲ್ಲಪ್ಪನವರ ಸಂಸ್ಮರಣೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆ 2 ರಂದು ಕಾಲೇಜಿನ ಒಳಾವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಿಮಲ್ಲಪ್ಪನವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್ ಪಂಚಾಕ್ಷರಸ್ವಾಮಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕರಾದ ಶಂಕರ್ ದೇವನೂರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಇದೇ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿಲ್ ಎಸ್.ಕರಭೀಮಗೋಳ್ ಮತ್ತು ಶೈಕ್ಷಣಿಕಾಧಿಕಾರಿ ಮಂಗಳಾ ಮುದ್ದು ಮಾದಪ್ಪ ಪಾಲ್ಗೊಳ್ಳುವರು.
ಇದೆ ವೇಳೆ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ಗಗನ್ ವಿ.ರೈ(588), ವಾಣಿಜ್ಯ ವಿಭಾಗದಲ್ಲಿ ಅನಿರುದ್ಧ್ (589) ಮತ್ತು ಕಲಾ ವಿಭಾಗದಲ್ಲಿ ಪರೀಕ್ಷಾನಂದ ಎಸ್(584) ಇವರುಗಳಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಗುತ್ತದೆ.
