(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಒಂದಾದ ಮನಿ ಡಬ್ಲಿಂಗ್ ಪ್ರಕ್ರಿಯೆ ಕೆಲ ಪೊಲೀಸರ ಬೆಂಗಾವಲಿನಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ಇದೀಗ ದಾಖಲಾದ ಪ್ರಕರಣವೊಂದು ಪುಷ್ಟೀಕರಿಸಿದೆ.
ದೂರುದಾರ ಸಚ್ಚಿದಾನಂದ ಎಂಬುವರಿಗೆ ಮೂರು ತಿಂಗಳ ಹಿಂದೆ ಒಬ್ಬ ವ್ಯಕ್ತಿ ಪರಿಚಯವಾಗಿದ್ದಾನೆ,ಆತನ ಮಾತು ನಂಬಿಕೊಂಡು ಹಣ ದ್ವಿಗುಣ ಮಾಡಿಕೊಳ್ಳಲು ಮುಂದಾಗಿದ್ದಾರೆ,ನಗರದ ಸ್ಥಳೀಯ ಹೊಟೆಲೊಂದರಲ್ಲಿ ರೂಂ ಪಡೆದುಕೊಂಡು ಕರೆ ಮಾಡಿದ್ದಾನೆ.
ಆ ವ್ಯಕ್ತಿ ನಾಲ್ಕು ಜನ ಪೊಲೀಸರ ಜೊತೆ ಹೋಗಿದ್ದಾನೆ ಎಂದು ಊಹಾಪೋಹಗಳು ಹರಡಿದೆ.
ಸೆನ್ ಠಾಣೆ ಹಾಗೂ ಪಟ್ಟಣ ಠಾಣೆಯ ಪ್ರಭಾರ ಪಿಎಸ್ಐ ಅಯ್ಯನಗೌಡ.ಸಿ, ಸಿಬ್ಬಂದಿಗಳಾದ ಮಹೇಶ, ಮೋಹನ, ಪಟ್ಟಣ ಠಾಣೆಯ ಬಸವಣ್ಣ ಎಂಬುವರು ಇಬ್ಬರು ವ್ಯಕ್ತಿಗಳ ಜೊತೆ ಹೊಟೇಲ್ ಗೆ ಹೋಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ರೂಮ್ ಒಳಗೆ ನುಗ್ಗುತಿದ್ದಂತೆ ಇವರೆಲ್ಲ ಸಚ್ಚಿದಾನಂದನ ಬಳಿಯಿದ್ದ ಲಕ್ಷಾಂತರ ಹಣವನ್ನು ಕಿತ್ತುಕೊಂಡಿದ್ದಾರೆ, ಈ ಬಗ್ಗೆ ಪ್ರಕರಣ ಮುಚ್ಚಿಹಾಕಲು ಮತ್ತೆ ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿದ್ದಾರೆ,ಆದರೆ ಸಚ್ಚಿದಾನಂದ ಬಳಿ ಹಣ ಇಲ್ಲದ ಕಾರಣ ವ್ಯಕ್ತಿಯೊಬ್ಬನ ಖಾತೆಗೆ ಪೋನ್ ಫೆ ಮುಖಾಂತರ 70.000 ಹಣ ಸಂದಾಯ ಮಾಡಿಕೊಂಡಿದ್ದಾರೆ.ಈ ಬಗ್ಗೆ ಸಚ್ಚಿದಾನಂದ ಪಟ್ಟಣ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿಗಳು ತಾಂತ್ರಿಕತೆಯಲ್ಲಿ ಪರಿಣಿತರಾಗಿದ್ದು ಮೊಬೈಲ್ ಬಳಸದೆ ಇಲಾಖೆಯನ್ನೆ ಯಾಮಾರಿಸಿದ್ದಾರೆ.
ಪೊಲೀಸರೆ ಪೊಲೀಸರನ್ನ ಶೋದಿಸಬೇಕಾದ ಅನಿವಾರ್ಯ ಎದುರಾಗಿದೆ ಎಂದು ತಿಳಿದುಬಂದಿದೆ.
ಎಸ್ಪಿ ಕವಿತಾ ಅವರು ಕೆಲವರನ್ನ ವರ್ಗಾವಣೆ ಮಾಡಿದರೂ ಅವರು ಹೋಗದೆ ಅವರ ಆದೇಶ ಉಲ್ಲಂಘನೆ ಮಾಡಿ ಅದೇ ಠಾಣೆಯಲ್ಲಿ ಉಳಿದುಕೊಂಡು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ.
ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದ ಪೊಲೀಸ್ ವರ್ಗದಲ್ಲೇ ಕೆಲವರು ಬೆಂಗಾವಲಾಗಿ ಬೆನ್ನಿಗೆ ನಿಂತಿರುವುದು ದುರಂತವೆ ಸರಿ.
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ, ಈಗಾಗಲೆ ಸಿಸಿ ಕ್ಯಾಮರಾ ಇನ್ನಿತರ ದಾಖಲೆಗಳನ್ನ ಸಂಗ್ರಹಿಸಿದ್ದು ಬಾಗಿಯಾಗಿದ್ದ ಪೊಲೀಸರ ಹೆಸರನ್ನ ಬಹಿರಂಗಗೊಳಿಸಲು ವಿಚಾರಣೆ ನಡೆಯುತ್ತಿದೆ ಎಂಬ ನೆಪದಿಂದ ಮೀನಾ ಮೇಷ ಎಣಿಸಲಾಗುತ್ತಿದೆ.
ಈ ಪ್ರಕರಣ ಎಷ್ಟರ ಮಟ್ಟಿಗೆ ಗಂಬೀರತೆ ಪಡೆಯಲಿದೆ ಎಂಬುದನ್ನ ಚಾಮರಾಜನಗರ ವರಿಷ್ಟಾದಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.