ಬೆಂಗಳೂರು: ಬೆಂಗಳೂರು ಹೊರವಲಯದ ಮಾದನಾಯಕನ ಹಳ್ಳಿ ಬಳಿ ಗನ್ ತೋರಿಸಿ ಬೆದರಿಕೆ ಹಾಕಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದ್ದು ಆಭರಣ ಅಂಗಡಿಗಳವರು ತೀವ್ರ ಆತಂಕಗೊಂಡಿದ್ದಾರೆ.
ರಾಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದ್ದು,ದರೋಡೆಕೋರರು ಮುಸುಕುಧಾರಿಗಳಾಗಿ ಒಳಗೆ ನುಗ್ಗುವ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜ್ಯುವಲ್ಲರಿ ಶಾಪ್ ಮುಚ್ಚಲು ಸಿಬ್ಬಂದಿ ಆಭರಣಗಳ ಬಾಕ್ಸ್ಗಳನ್ನು ಜೋಡಿಸಿ ಇಡುತ್ತಿದ್ದಾಗಲೇ ಮುಸುಕು ಧರಿಸಿದ್ದ ಮೂವರು ದರೋಡೆಕೋರರು ಸಡನ್ನಾಗಿ ಒಳಗೆ ನುಗ್ಗಿ ಗಲ್ಲಾದ ಚೇರ್ ನಲ್ಲಿ ಕುಳಿತಿದ್ದ ಮಾಲೀಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ,ಉಳಿದವರು ಆಭರಣಗಳ ಬಾಕ್ಸ್ಗಳನ್ನು ಚೀಲಕ್ಕೆ ತುಂಬಿ ಓಡುತ್ತಾರೆ.
ಮಾಚೋಹಳ್ಳಿ ಗೇಟ್ ನ ಭೈರವೇಶ್ವರ ಕಾಂಪ್ಲೆಕ್ಸ್ ನಲ್ಲಿರೋ ರಾಮ್ ಜ್ಯುವೆಲ್ಲರ್ಸ್
ಮುಚ್ಚುವಾಗ ದರೋಡೆಕೋರರು ನುಗ್ಗಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಈ ವೇಳೆ ಮಾಲೀಕ ಕನ್ನಯ್ಯಲಾಲ್ ಕಿರುಚಾಡಿ ಸಹಾಯಕ್ಕೆ ಕೂಗಿದ್ದಾರೆ.ಕನ್ನಯ್ಯಲಾಲ್ ಕೂಗಾಟ ಕೇಳಿ ಪಕ್ಕದ ಅಂಗಡಿಯವರು ಬಂದಿದ್ದಾರೆ.ಅವರ ಮೇಲೂ ಚಾಕುವಿನಿಂದ ಅಟ್ಯಾಕ್ ಮಾಡಿ ಪರಾರಿಯಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
