ಪತ್ನಿ ಎದುರು ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ

Spread the love

ಬೆಳಗಾವಿ: ಪತ್ನಿ ಹಾಗೂ ಅಳಿಯನ ಮುಂದೆಯೇ ಕತ್ತು ಕೊಯ್ದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ.

ಮಲ್ಲಪ್ಪ ಕಟಬುಗೋಳ(34) ಆತ್ಮಹತ್ಯೆ ಮಾಡಿಕೊಂಡವ.

ನಿನ್ನೆಯಷ್ಟೇ ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದು ಮಲ್ಲಪ್ಪ ಗಲಾಟೆ ಮಾಡಿದ್ದ,ಇಡೀ ರಾತ್ರಿ ಹೆಂಡತಿ ರೇಖಾ ಜೊತೆಗೆ ಗಲಾಟೆ ಮಾಡಿದ್ದಲ್ಲದೆ ಹಲ್ಲೆ ಕೂಡಾ ಮಾಡಿದ್ದ.

ರೇಖಾ ಸಹೋದರನನ್ನು ಕರೆಯಿಸಿ ಬುದ್ದಿ ಹೇಳಿದ್ದಳು.ಆಗ ರೇಖಾ ಸಹೋದರ ಮಲ್ಲಿಕಾರ್ಜುನ ಕಟ್ಟಿಗೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ,
ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂದು ಬೈದಿದ್ದಾನೆ.

ಆಗ ಮಲ್ಲಪ್ಪ ಕತ್ತು ಕೊಯ್ದುಕೊಂಡಿದ್ದಾನೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ.

ಮಲ್ಲಪ್ಪ ಸಾಯುತ್ತಿದ್ದಂತೆ ಸ್ಥಳದಲ್ಲಿದ್ದ ಅಳಿಯ ಮಲ್ಲಿಕಾರ್ಜುನ ಓಡಿಹೋಗಿದ್ದಾನೆ.

ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.