ಮೈಸೂರು: ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಗತಿ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತ್ ಸಿಇಒ ಎಸ್.ಯುಕೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿ ದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಯ್ಯನ ಮುದ್ದಯನ ಹುಂಡಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿ, ಈಗಾಗಲೇ ಮೀಟರ್ ಅಳವಡಿಸಿ ನಲ್ಲಿ ಸಂಪರ್ಕ ಪೂರ್ಣಗೊಂಡು ನೀರನ್ನು ಪೂರೈಸುತ್ತಿರುವ ಕಡೆ ಜನರಿಗೆ ಮೀಟರ್ ರೀಡಿಂಗ್ ಪ್ರಾರಂಭಿಸಿ ಅರಿವು ಮೂಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಅಣ್ಣೂರಿನ ಭುಕ್ತನ ಮಾಳ, ಬೀಚನಹಳ್ಳಿ ಅಂತರಸಂತೆ ಹೊನ್ನೂರು ಕುಪ್ಪೆ ಹಾಗೂ ಅಂತರಸಂತೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗನ್ನು ಪರಿಶೀಲಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಫಾಲಕ ಅಭಿಯಂತರರಿಗೆ ಸೂಚಿಸಿದರು.
ಬಳಿಕ ಸರಗೂರು ತಾಲ್ಲೂಕಿನ ಬಿದರಹಳ್ಳಿಯ ನಂಜನಾಥಪುರ ಹಾಗೂ ಬಿ.ಮಟಕೆರೆಯ ಕೂಡಗಿ ಹಾಡಿಗೆ ಸಹ ಭೇಟಿ ನೀಡಿ ಕಾಮಗಾರಿ ಪರಿವೀಕ್ಷಿಸಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆ ಗಂಗೆ ಕಾರ್ಯಕ್ರಮದ ಮೂಲಕ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಫಾಲಕ ಇಂಜಿನಿಯರ್ ಎ.ಎಸ್ ರಂಜಿತ್ ಕುಮಾರ್, ಹೆಚ್.ಡಿ.ಕೋಟೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಫಾಲಕ ಇಂಜಿನಿಯರ್ ಗೋವಿಂದ ನಾಯಕ, ಕಿರಿಯ ಕಾರ್ಯಫಾಲಕ ಇಂಜಿನಿಯರ್ ಗಳಾದ ಮೋನಶ್ರೀ, ಕೆ.ಸುನೀಲ್, ನಾಗೇಶ್, ಮೋಹನ್ ರಾಜ್, ಜಲ ಜೀವನ್ ಮಿಷನ್ ಜಿಲ್ಲಾ ಸಮಾಲೋಚಕರಾದ ಚೇತನ್ ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹೆಚ್.ಟಿ.ಪ್ರಭಾಕರ, ಅಶ್ವಿನಿ, ಸಂತೋಷ್ ನಾಗ್, ಕೆ.ಪಿ.ಸುರೇಶ್, ನರಸಿಂಹ ಮೂರ್ತಿ, ಭಾಗ್ಯ ಮತ್ತಿತರರು ಹಾಜರಿದ್ದರು.