ಮೈಸೂರು: ಮೈಸೂರು ಜಿಲ್ಲಾ ಸಮಾಜ ಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಜುಲೈ 25 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸರ್ಕಾರಿ ಮಹಾರಾಜ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಮಾಜಶಾಸ್ತ್ರದ ಕುಟುಂಬ ಸಂಭ್ರಮ,ಒಂದು ದಿನದ ಶೈಕ್ಷಣಿಕ ಸಮ್ಮೇಳನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ಪ್ರಶ್ನೋತ್ತರ ಕೈಪಿಡಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ಮೈಸೂರು ಜಿಲ್ಲೆಯ ಉಪನಿರ್ದೇಶಕರಾದ ಎಂ.ಎಲ್ ಚಿದಾನಂದ ಕುಮಾರ್ ಎಂ.ಎಲ್.ಅವರು ಉದ್ಘಾಟಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಖ್ಯಾತ ಸಮಾಜಶಾಸ್ತ್ರಜ್ಞೆ ಪ್ರೊ.ಆರ್.ಇಂದಿರಾ ನೀಡಲಿದ್ದಾರೆ . ಕೈಪಿಡಿ ಬಿಡುಗಡೆಯನ್ನು ಮಂಡ್ಯ ಜಿಲ್ಲೆಯ ಉಪನಿರ್ದೇಶಕರಾದ ಸಿ ಚಲುವಯ್ಯ ಅವರು ನೆರೆವೇರಿಸುವರು.
ವಿಶೇಷ ಆಹ್ವಾನಿತರಾಗಿ ರಾಮನಗರ ಜಿಲ್ಲೆಯ ಉಪದೇಶಕರಾದ ಎಂ.ಪಿ ನಾಗಮ್ಮ ಅವರು ಆಗಮುಸಲಿದ್ದಾರೆ.
ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಾಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷರಾದ ಸಿ.ಆರ್. ದಿನೇಶ್ ಅವರು ವಹಿಸುವರು.
ಕಾರ್ಯಕ್ರಮದಲ್ಲಿ ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್. ಉದಯ ಶಂಕರ್, ಸರಗೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ಹೆಚ್.ವಿ., ವೇದಿಕೆಯ ಗೌ.ಅಧ್ಯಕ್ಷರಾದ ಎಚ್.ಎಸ್ ರವಿಶಂಕರ್, ಪ್ರಧಾನ ಕಾರ್ಯದರ್ಶಿಯಾದ ವಿಜಯಕುಮಾರ್ ಎನ್.ಪಿ, ಖಜಾಂಚಿ ಹೆಚ್. ಹಾಲಪ್ಪನವರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಶೇ 100 ಫಲಿತಾಂಶ ಬಂದಿರುವ ಕಾಲೇಜುಗಳ ಉಪನ್ಯಾಸಕರುಗಳಿಗೆ ಮತ್ತು ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿ ನಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ವೇದಿಕೆಯ ಗೌರವಾಧ್ಯಕ್ಷರಾದ ಸಿ.ಆರ್ ದಿನೇಶ್ ಅವರು ತಿಳಿಸಿದ್ದಾರೆ.