ಬೆಳಗಾವಿಯಲ್ಲಿ ಯೋಧನ ತಂದೆಯ ಬರ್ಬರ ಹತ್ಯೆ

Spread the love

ಬೆಳಗಾವಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯೋಧರೊಬ್ಬರ ತಂದೆಯನ್ನು ಭೀಕರವಾಗಿ ಹತ್ಯೆ‌ ಮಾಡಿರುವ ಘಟನೆ ಜಿಲ್ಲೆಯ ‌ಕಾಗವಾಡ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳದ ಕಬ್ಬಿನ ಗದ್ದೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಶೇಡಬಾಳ ಗ್ರಾಮದ ರಾವಸಾಹೇಬ್ ಪಾಟೀಲ್ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಕೊಲೆ ನಡೆದಿದ್ದು, ಅದೆ ಗ್ರಾಮದ ಶಶಿಕಾಂತ್ ಕೃಷ್ಣಾ ಹೊನಕಾಂಬಳೆ (55) ಕೊಲೆಯಾದವರು.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಶಿಕಾಂತನನ್ನು ಕೊಲೆ ಮಾಡಲಾಗಿದೆ ಎಂದು ಶಶಿಕಾಂತ್ ಅವರ ಪುತ್ರ ರಾಹುಲ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ಶಶಿಕಾಂತ ಅವರಿಗೆ ಇಬ್ಬರು ಪುತ್ರರು ಇದ್ದು, ಅದರಲ್ಲಿ ಒಬ್ಬರು ಯೋಧನಾಗಿದ್ದಾರೆ.

ತಂದೆಯ ಶವದ ಬಳಿ ಮಕ್ಕಳ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಕಾಗವಾಡ ಮತ್ತು ಅಥಣಿ ಪೊಲೀಸರು ಭೇಟಿ ನೀಡಿ ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ.