ಎಬಿಜಿಪಿ ಮೈಸೂರು ಜಿಲ್ಲಾ “ಸಹ ಕಾರ್ಯದರ್ಶಿ ಯಾಗಿ ರಕ್ತದಾನಿ ಮಂಜು” ನೇಮಕ

Spread the love

ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ “ಸಹ ಕಾರ್ಯದರ್ಶಿ ಯಾಗಿ ರಕ್ತದಾನಿ ಮಂಜು” ನೇಮಕಗೊಂಡಿದ್ದು,ಅವರಿಗೆ ನೇಮಕ ಪತ್ರವನ್ನು ಕರ್ನಾಟಕ ಪ್ರಾಂತ ಅಧ್ಯಕ್ಷರಾದ ನರಸಿಂಹ ನಕ್ಷತ್ರಿ ವಿತರಿಸಿದರು.

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ “ರಕ್ತದಾನಿ ಮಂಜು” ಅವರಿಗೆ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ನೇಮಕ ಪತ್ರವನ್ನು ನೀಡಿ ಅವರು ಶುಭ ಕೋರಿದರು.

ಈ ಸಂದರ್ಭದಲ್ಲಿ ಪ್ರಾಂತ ಕಾರ್ಯದರ್ಶಿ ಗಾಯಿತ್ರಿ ನಾಡಿಗ್, ವನವಾಸಿ ಕಲ್ಯಾಣ ಪ್ರಾಂತದ ಕೋಶಾಧ್ಯಕ್ಷ ಉಮೇಶ್ ಪ್ರಸಾದ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಕಂಠೇಶ್, ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ರವರು ಮತ್ತಿತರರು ಹಾಜರಿದ್ದರು.