ಜು.20 ರಂದು ಗ್ರಾಹಕ ಪಂಚಾಯತ್ ಜಿಲ್ಲಾ ಅಭ್ಯಾಸ ವರ್ಗ

ಮೈಸೂರು: ಎಚ್ಚರ ಗ್ರಾಹಕ ಎಚ್ಚರ ಎಂಬುದಾಗಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವಲ್ಲಿ ಗ್ರಾಹಕ ಪಂಚಾಯಿತ್ ವಿಶೇಷ ಅಭ್ಯಾಸ ವರ್ಗ ಹಮ್ಮಿಕೊಂಡಿದೆ.

ಕಾರ್ಯಕರ್ತ ನಿರ್ಮಾಣ ಗ್ರಾಹಕ ಪಂಚಾಯಿತ್ ನ ಮುಖ್ಯ ಕಾರ್ಯಗಳಲ್ಲಿ ಒಂದಾಗಿದ್ದು, ಅದರಂತೆ ಕಾರ್ಯಕರ್ತ ನಿರ್ಮಾಣವನ್ನು ಮಾಡುವ ನಿಟ್ಟಿನಲ್ಲಿ ಜುಲೈ 20 ರಂದು ಬೆಳಗ್ಗೆ 9.30 ರಿಂದ ಮೈಸೂರಿನ ಅಗ್ರಹಾರದ ಕಲ್ಯಾಣ ಭವನದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಅಭ್ಯಾಸ ವರ್ಗವನ್ನು ಹಮ್ಮಿಕೊಂಡಿದೆ.

ಅಭ್ಯಾಸ ವರ್ಗದ ಅಧ್ಯಕ್ಷತೆಯನ್ನು ಪ್ರಾಂತದ ಅಧ್ಯಕ್ಷರಾದ ನರಸಿಂಹ ನಕ್ಷತ್ರಿಅವರು ವಹಿಸಲಿದ್ದಾರೆ. ಈ ಅಭ್ಯಾಸ ವರ್ಗದ ಉದ್ಘಾಟನೆಯನ್ನು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ನವೀನ್ ಕುಮಾರಿಯವರು ನೆರವೇರಿಸಲಿದ್ದಾರೆ.

ಗ್ರಾಹಕ ಶಿಕ್ಷಣದ ಅಗತ್ಯತೆಯ ಬಗ್ಗೆ ಡಾ. ಜ್ಯೋತಿಶಂಕರ್ ಅವರು ತಿಳಿಸಿಕೊಡಲಿದ್ದಾರೆ. ಗ್ರಾಹಕ ಪಂಚಾಯತ್ ಕಾರ್ಯ ಚಟುವಟಿಕೆಗಳು ಹಾಗೂ ಜಿಲ್ಲಾ ಘಟಕದ ಕರ್ತವ್ಯಗಳು ಮುಂತಾದ ವಿಷಯಗಳ ಬಗ್ಗೆ ವರ್ಗಗಳು ನಡೆಯಲಿದೆ.

ಶೋಷಣಾ ಮುಕ್ತ ಸಮಾಜದ ಸಂಕಲ್ಪ ದೊಂದಿಗೆ ಎಲ್ಲರೂ ಸಮಾಜದಲ್ಲಿ ಗ್ರಾಹಕರ ಹಿತಕ್ಕಾಗಿ ಕಾರ್ಯನಿರ್ವಹಿಸೋಣ ಎಂದು ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.