ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅಪಮಾನಕ್ಕೀಡಾಗಿದ್ದ ಅಧಿಕಾರಿಗೆ ಸರಕಾರ ಉತ್ತಮ ಹುದ್ದೆ ನೀಡಿದೆ.
ಹೌದು ಇದು ನಿಜ.ಧಾರವಾಡ ಹೆಚ್ಚುವರಿ ಪೊಲೀಸ್ ಅಧಿಕ್ಷರಾಗಿದ್ದ ನಾರಾಯಣ ಭರಮನಿ ಅವರಿಗೆ ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿ ಸರಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಅವರು ಸಾರ್ವಜನಿಕವಾಗಿ ಗದರಿದ್ದರಿಂದ ಮನನೊಂದು ನಾರಾಯಣ ಭರಮನಿ ರಾಜೀನಾಮೆಗೆ ಮುಂದಾಗಿದ್ದುದು ಎಲ್ಲರಿಗೂ ಗೊತ್ತಿರುವ ವಿಷಯ.
ನಂತರ ಸರಕಾರ ಭರಮನಿ ಅವರ ಮನವೊಲಿಸಿ ಈಗ ಅವರಿಗೆ ಡಿಸಿಪಿ ಹುದ್ದೆ ನೀಡಿದೆ. ಬೆಳಗಾವಿ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆಯು ಐಪಿಎಸ್ ಕೇಡರ್ ಅಧಿಕಾರಿಗಳ ಹುದ್ದೆ ಆಗಿದೆ.