ಒಕ್ಕಲಿಗ ಮಹಿಳಾ ಸಮಜದ ಬೆಳ್ಳಿ ಹಬ್ಬದಸಂಭ್ರಮ:ಶ್ರೀ ಸೋಮೇಶ್ವರನಾಥ ಸ್ವಾಮೀಜಿ

Spread the love

ಮೈಸೂರು: ಒಕ್ಕಲಿಗ ಕುಲಬಾಂಧವರು
ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದ 25ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗ ಹಿಸಬೇಕೆಂದು ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಹ್ವಾನಿಸಿದರು.

ಮೈಸೂರಿನ ಕುವೆಂಪು ನಗರದಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದ ವತಿಯಿಂದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದ 25 ನೇ ವರ್ಷದ ವಾರ್ಷಿಕೋತ್ಸವದ ಪೋಸ್ಟರ್ ಅನಾವರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದ 25ನೇ ವಾರ್ಷಿಕೋತ್ಸ ಸಮಾರಂಭವು ಆಗಸ್ಟ್ 1ರಂದು ಶುಕ್ರವಾರ
ಕುವೆಂಪುನಗರದಲ್ಲಿರುವ ಕಾಳಮ್ಮ ಬಂದಂತಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಈ ಸಮಾರಂಭಕ್ಕೆ ಒಕ್ಕಲಿಗ ಕುಲಬಾಂದರೂಂದಿಗೆ ಮೈಸೂರಿನ ಜನತೆಯು ಭಾಗ ಹಿಸಬೇಕೆಂದು ಸೋಮೇಶ್ವರನಾಥ ಸ್ವಾಮೀಜಿಯವರು ಕರೆ ನೀಡಿದರು.

25 ವರ್ಷದ ಹೆಣ್ಣು ಮಕ್ಕಳ ಒಗ್ಗಟ್ಟಿನ ಬಲವೇ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಎಂದು ಶ್ರೀಗಳು ಶ್ಲಾಘಿಸಿದರು.

ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ಅಧ್ಯಕ್ಷೆ ಸವಿತ ಗೌಡ ಅವರು ಮಾತನಾಡಿ, ಆಗಸ್ಟ್ 1ರಂದು ನಡೆಯಲಿರುವ ಬೆಳ್ಳಿ ಹಬ್ಬಕ್ಕೆ ಎಲ್ಲ ಸಹೋದರ-ಸಹೋದರಿಯರು ಆಗಮಿಸಿ, ಸಮಾರಂಭ ಯಶಸ್ಸಿಯಾಗುವಂತೆ ನಮ್ಮೂಂದಿಗೆ ಕೈ ಜೋಡಿಸುವಂತೆ
ಮನವಿ ಮಾಡಿದರು.

ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಂಘದ ಸದಸ್ಯರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು

ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ, ಅನಿತ, ಸುನಂದ, ವಸಂತ, ಸುವರ್ಣ ಗಣೇಶ,ವಿಮಲ, ರತ್ನ, ರುಕ್ಮಿಣಿ ರಮೇಶ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.