ಮುನಿರತ್ನ ರಾಜೀನಾಮೆಗೆ ಪುಷ್ಪ ಅಮರನಾಥ್ ಆಗ್ರಹ

Spread the love

ಮೈಸೂರು: ಮುನಿರತ್ನ ಅಂತ ಹೆಸರು ಇಟ್ಟುಕೊಂಡು ಇಂತ ನೀಚ ಮಾತುಗಳನ್ನಾಡುವ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮುನಿರತ್ನ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಶಾಸಕ ಮುನಿರತ್ನ ಅವರ ಅವಹೇಳನಕಾರಿ ಆಡಿಯೋ ಕುರಿತು ಖಂಡಿಸಿದ ಅವರು, ಹೆಸರು ಹೇಳಲಿಕ್ಕೂ ಅಸಹ್ಯವಾಗುತ್ತದೆ, ಮಹಿಳೆಯರು, ದಲಿತರು ಅಂದರೆ ಏನೆಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರ ಮನಸ್ಥಿತಿ ಏನು ಅಂತ ಇಂತಹ ನಾಯಕರ ಮಾತಿನಿಂದ ವ್ಯಕ್ತವಾಗುತ್ತದೆ. ಈ ವಿಚಾರವಾಗಿ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಮುನಿರತ್ನ ಅವರ ರಾಜೀನಾಮೆ ಪಡೆದು ಪಕ್ಷದಿಂದ ವಜಾ ಮಾಡಬೇಕು. ತಾಕತ್ತು ದಮ್ಮುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪುಷ್ಪ ಅಮರ್ ನಾಥ್ ಒತ್ತಾಯಿಸಿದರು.

ಹುಡಾ ಅಧ್ಯಕ್ಷ ಗಾದಿ ದೊಡ್ಡ ಹುದ್ದೆಯೇನಲ್ಲ ಅವರು ಕಾಂಗ್ರೆಸ್ ಪಕ್ಷ ಮತ್ತು ಸಂಘಟನೆಗೆ ದುಡಿದಿರುವುದನ್ನು ಗುರುತಿಸಿ ಒಂದು ಸಣ್ಣ ಹುದ್ದೆ ಕೊಟ್ಟಿದ್ದಾರೆ. ಅದರಿಂದ ಜನರಿಗೆ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿ ಪತಿ ಅಮರ್ ನಾಥ್ ಹುದ್ದೆಯನ್ನು ಪುಷ್ಪ ಸಮರ್ಥಿಸಿಕೊಂಡರು.