ಪುನೀತ್ ಜಿ ಕೂಡ್ಲೂರು ಅವರಿಗೆ ಸೋಷಿಯಲ್ ಸರ್ವಿಸ್ ಪ್ರಶಸ್ತಿ

Spread the love

ಬೆಂಗಳೂರು: ಮೈಸೂರಿನ
ಪುನೀತ್ ಜಿ ಕೂಡ್ಲೂರು ಅವರು ಎಕ್ಸೆಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಅಂಡ್ ಸೋಷಿಯಲ್ ಸರ್ವಿಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಹೈಡೆ ಪಾರ್ಕ್ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಐಕಾನ್ ಎಕ್ಸೆಲೆಂಟ್ ಅವಾರ್ಡ್ -2025 ರಲ್ಲಿ
ಪುನೀತ್ ಜಿ ಕೂಡ್ಲೂರು ಅವರು ತಮ್ಮ ಸಾಫ್ಟ್ವೇರ್ ವೃತ್ತಿಯೊಂದಿಗೆ ವಿದ್ಯಾಸ್ಪಂದನ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ 500 ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡುತ್ತಿದ್ದಾರೆ.

ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸ್ಥಾಪಿಸಿ ಅದರಲ್ಲಿ ಹಲವು ವಿದ್ಯಾರ್ಥಿಗಳಿಗೆ ಶ್ಲೋಕ, ಸಂಸ್ಕಾರ ತರಗತಿಗಳನ್ನು ನೆಡೆಸುತ್ತಿದ್ದಾರೆ.

ಜೊತೆಗೆ ಪರಿಸರ, ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮ ಮಾಡುತ್ತಾ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿರುವ ಇವರ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಮಾಜ ಸೇವೆ ಪ್ರಶಸ್ತಿಯಾದ ಕರ್ನಾಟಕ ಎಕ್ಸಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಆಂಡ್ ಸೋಷಿಯಲ್ ಸರ್ವಿಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಡಾ. ಅಂಜನಪ್ಪ, ಪ್ರಕೃತಿ ಪ್ರಸನ್ನ , ಪೂಜಾ ಎನ್ , ಡಾ. ಪೃಥು ಪಿ ಅದ್ವೈತ್, ಶೃತಿ ರಾಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.‌