ಮೈಸೂರು: ಪ್ರತಿಯೊಬ್ಬರು ವಿಷ್ಣು ಸಹಸ್ರನಾಮ ಪಠಣ ಮಾಡಬೇಕು ಎಂದು ಬೆಂಗಳೂರಿನ ಎಲ್.ಎನ್.ಶರ್ಮ ಅವರು ತಿಳಿಸಿದರು.
ಮೈಸೂರಿನಲ್ಲಿ ಶನಿವಾರ ಮುಲಕನಾಡು ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಷ್ಣು ಸಹಸ್ರನಾಮವನ್ನು ಸಂತೋಷವಾದಾಗಲು ಹೇಳಬೇಕು ದುಃಖವಾದಾಗಲು ಹೇಳಬೇಕು ಇದರಿಂದ ಶಾಂತಿ ಲಭಿಸುತ್ತದೆ ಎಂದು ತಿಳಿಸಿದರು.
ವೇದ ಪಠಣ ಮಾಡಲು ಸಮಯ ಬೇಕು ಸಂದರ್ಭ ಬೇಕು, ಗುರುಗಳ ಮುಖೇನವೇ ಆಗಬೇಕು, ಆದರೆ ವಿಷ್ಣು ಸಹಸ್ರನಾಮ ಹೇಳಲು ಇದ್ಯಾವುದು ಬೇಡ. ಇದರಲ್ಲಿ ನಾಲ್ಕು ವೇದಗಳು ಸೇರಿದಂತೆ ಎಲ್ಲವೂ ಇದೆ. ಹಾಗಾಗಿ ಕಾಲ, ಸಮಯ, ಸಂದರ್ಭ ಯಾವುದು ಇಲ್ಲದೆ ವಿಷ್ಣು ಸಹಸ್ರನಾಮವನ್ನು ಹೇಳಬಹುದು ಎಂದು ಅವರು ತಿಳಿಸಿದರು.
ಭೀಷ್ಮಚಾರ್ಯರು ಕೌರವ ಪಾಂಡವರ ಯುದ್ಧದ ಕೊನೆಯಲ್ಲಿ ಶರಚ್ಛಯೆಯಲ್ಲಿ ಮಲಗಿದ್ದಾಗ ಶ್ರೀ ಕೃಷ್ಣ ಪರಮಾತ್ಮನು ಆಚಾರ್ಯರ ಬಾಯಿಂದ ವಿಷ್ಣು ಸಹಸ್ರನಾಮವನ್ನು ಹೇಳಿಸಿ ಜಗತ್ತಿಗೆ ಇದರಿಂದ ಆಗುವ ಒಳಿತನ್ನು ನಮಗೆಲ್ಲರಿಗೂ ಬಳುವಳಿಯಾಗಿ ಕೊಟ್ಟಿದ್ದಾರೆ ಹಾಗಾಗಿ ಎಲ್ಲರೂ ವಿಷ್ಣು ಸಹಸ್ರನಾಮವನ್ನು ಹೇಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಟಿ.ವಿ.
ವೆಂಕಟಚಲ ಶಾಸ್ತ್ರಿ ಅವರು ಮಾತನಾಡಿ ಗುರು ಪೌರ್ಣಮಿಯ ಮಹತ್ವವನ್ನು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಅದಕ್ಕಾಗಿ ನಮ್ಮ ಸಭಾ ವತಿಯಿಂದ ಇಂತಹ ಒಂದು ಉತ್ತಮ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಟಿ ಕೆ ಉಮೇಶ್, ಮೈಸೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಚ್ ಎಲ್ ಚಂದ್ರಶೇಖರ್, ನಿವೃತ್ತ ಉಪಾಧ್ಯಾಯರಾದ ಬಿ.ಕೆ ಗೋಪಿನಾಥ್, ಹಾಗೂ ಪುರೋಹಿತರಾದ ಬೆಂಗಳೂರಿನ ವೈ. ಬಾಲಕೃಷ್ಣ, ರಾಮೇಶ್ವರ ಶಾಸ್ತ್ರಿ ಮತ್ತು ಮೈಸೂರಿನ ನಾಗರಾಜ ಭಟ್ ಅವರನ್ನು ಸನ್ಮಾನಿಸಲಾಯಿತು.
ಸಭಾದ ಅಧ್ಯಕ್ಷ ಗುರುಮೂರ್ತಿ,ಉಪಾಧ್ಯಕ್ಷ ರಾದ ಶೈಲಜ,ಗೌ.ಕಾರ್ಯದರ್ಶಿ ಪ್ರೊ.ಸಿ.ಆರ್.ನಟರಾಜ್ ಮತ್ತಿತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.