ಮೈಸೂರು: ಆಷಾಡ ಮಾಸದ ಮೂರನೇ ಶುಕ್ರವಾರವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ
ಚಲನಚಿತ್ರ ನಟ ವಸಿಷ್ಟ ಸಿಂಹ ಅವರು
ವಿಶೇಷ ಪೂಜೆ ಸಲ್ಲಿಸಿದರು.
ಇದೇವೇಳೆ ನಟ ವಸಿಷ್ಟ ಸಿಂಹ ಅವರು ಮಹಿಳೆಯರಿಗೆ ಬಾಗಿನ ವಿತರಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಯುವ ಮುಖಂಡ ಬೈರತಿ ಲಿಂಗರಾಜು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವಿಭಾಗದ ರೇಖಾ ಶ್ರೀನಿವಾಸ್, ಕೆಪಿಸಿಸಿ ಸಂಯೋಜಕ ಚಂದ್ರು, ಪಂಚಾಯತ್ ಕಾರ್ಯದರ್ಶಿ ಲೋಕೇಶ್, ಚಾಮುಂಡೇಶ್ವರಿ ಪ್ಲೈವುಡ್ ಮಾಲೀಕ ಮಹದೇವ್ ಮತ್ತು ದೇವಸ್ಥಾನದ ಸಿಬ್ಬಂದಿ ಹಾಜರಿದ್ದರು.