ಮೈಸೂರು: ಜಿಲ್ಲೆಯ ಹೆಚ್ ಡಿ.ಕೋಟೆ ತಾಲೂಕು, ಸರಗೂರು ಬಳಿಯ ಗ್ರಾಮವೊಂದರಲ್ಲಿ ಗೋಬರ್ ಗ್ಯಾಸ್ ಬಾವಿಗೆ ಬಿದ್ದಿದ್ದ ಹುಲಿಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸರಗೂರು ವ್ಯಾಪ್ತಿಯ ಬಿಡಗಲು ಗ್ರಾಮದಲ್ಲಿ ಆಕಸ್ಮಿಕವಾಗಿ ಗೋಬರ್ ಗ್ಯಾಸ್ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಹುಲಿಯನ್ನು ರಕ್ಷಣೆ ಮಾಡಲಾಗಿದೆ.
ಕಮಲ ಮಂಂ
ಗ್ರಾಮದ ನವೀನ್ ಎಂಬುವವರ ಹಳೆಯ ಗೋಬರ್ ಗ್ಯಾಸ್ ಬಾವಿಯಲ್ಲಿ ಹುಲಿ ಬಿದ್ದಿತ್ತು.
ಹುಲಿಯ ಗರ್ಜನೆ ಕೇಳಿ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗೆ ಅರವಳಿಕೆ ಮದ್ದು ನೀಡಿದರು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಹುಲಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸಿದ್ದಾರೆ.
6 ತಿಂಗಳ ಗಂಡು ಹುಲಿಯನ್ನ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.