ಒಣಗುತ್ತಿರುವ ಬೆಳೆ:7 ಗಂಟೆ ಕಾಲ ವಿದ್ಯುತ್ ನೀಡಲು ರೈತರ ಒತ್ತಾಯ

Spread the love

ಯಾದಗಿರಿ: ಭೀಮಾನದಿ ನೀರನ್ನು ನಂಬಿ ಭತ್ತ ಹಾಗೂ ಹತ್ತಿ ಬೆಳೆಯುವ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಭೀಮಾನದಿಗೆ ಹೆಚ್ಚಿನ ನೀರು ಹರಿಬಿಡಲಾಗಿದೆ.

ಭೀಮಾನದಿ ನೀರನ್ನು ನಂಬಿ ಭತ್ತ ಹಾಗೂ ಹತ್ತಿ ಬೆಳೆದ ರೈತರು ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ವಿದ್ಯುತ್ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ,ಗೊಡಿಯಾಳ,ಕುಮನೂರು,ಗಡ್ಡೆಸೂಗುರು ಭೀಮಾನದಿ ತೀರದ ರೈತರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಕಂಗಲಾಗಿದ್ದಾರೆ.

ಭೀಮಾನದಿಯಲ್ಲಿ ನೀರು ಇದ್ದರು ವಿದ್ಯುತ್ ಸಮಪರ್ಕವಾಗಿ ಪೂರೈಕೆ ಮಾಡದ ಕಾರಣ ಭೀಮಾನದಿಯಿಂದ ಐಪಿಸೆಟ್ ಮೂಲಕ ಭತ್ತ ಹಾಗೂ ಹತ್ತಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಆಗುತ್ತಿಲ್ಲ.

ಐಪಿಸೆಟ್ ಗಳಿಗೆ ಜೆಸ್ಕಾಂ ಅಧಿಕಾರಿಗಳು 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು, ಆದರೆ,ವಿವಿಧ ಕಾರಣ ನೀಡಿ ಕರೆಂಟ್ ತೆಗೆಯುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ರೈತರು ಕೂಲಿ ಕಾರ್ಮಿಕರನ್ನು ಕೂಲಿಗೆ ಹಚ್ಚಿ ಭತ್ತ ನಾಟಿ ಮಾಡಿಸಿದ್ದಾರೆ.ಇನ್ನು ಬಹಳ ಮಂದಿ ರೈತರು ಭತ್ತ ನಾಟಿ ಮಾಡಬೇಕಿದೆ,ಆದರೆ, ನೀರಿನ ಸಮಸ್ಯೆಯಾಗಿದೆ.

ನಾಟಿ ಮಾಡಿರುವ ಭತ್ತ ನೀರಿನ ಕೊರತೆಯಿಂದ ಒಣಗುತ್ತಿದೆ.ನೀರಿನ ಕೊರತೆಯಿಂದ ಜಮೀನು ಬಿರುಕುಬಿಟ್ಟಿದೆ.ಇತ್ತ ಹತ್ತಿ ಬೆಳೆಗೂ ಕೂಡಾ ನೀರಿನ ಕೊರತೆಯಾಗಿದೆ.ಸಾಲ ಮಾಡಿ ಭತ್ತ ಬೆಳೆದ ರೈತ ನದಿಯಲ್ಲಿ ನೀರು ಇದ್ದರೂ ಬೆಳೆಗೆ ನೀರು ಹರಿಸಲು ಆಗದಕ್ಕೆ ಬೆಳೆ ಒಣಗಿ ಹೋಗುತ್ತಿವೆ.

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ವಿದ್ಯುತ್ ವಿತರಣ ಕೇಂದ್ರಕ್ಕೆ ಆಗಮಿಸಿದ ರೈತರು ಜೇಸ್ಕಾಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು.

ನಾವು ಬೆಳೆದರೆ ಮಾತ್ರ ನೀವು ಅನ್ನ ತಿನ್ನಬಹುದು,ನಮಗೆ ಯಾಕೆ ಸರಿಯಾಗಿ ಕರೆಂಟ್ ಕೊಡುವುದಿಲ್ಲ,ನಮಗೆ ಕೊಡಬೇಕಾದ 7 ಗಂಟೆ ಕರೆಂಟ್ ಸರಿಯಾಗಿ ಕೊಡಿ ಎಂದು ಒತ್ತಾಯಿಸಿದರು.

7 ಗಂಟೆ ಐಪಿಸೆಟ್ ಗೆ ಸರಿಯಾಗಿ ಕರೆಂಟ್ ಕೊಡದಿದ್ದರೆ ಉಗ್ರ ಹೋರಾಟ ಮಾಡುತ್ತೆವೆಂದು ರೈತರು ಎಚ್ಚರಿಕೆ ನೀಡಿದರು.

ಈ ವೇಳೆ ಸಂಗಾರೆಡ್ಡಿ ಗೊಡಿಹಾಳ
,ಮಲ್ಲಣ್ಣಗೌಡ ಮಾಲಿಪಾಟೀಲ ಹಾಲಗೇರಾ,ವಿಜಯಕುಮಾರ್ ಪಾಟೀಲ ಕುಮನೂರು,ನಾಗೇಶ್ವರರಾವ್ ,ನಾನಿ,ಬಸವರಾಜ್ ಗೌಡ ದಳಪತಿ ಸೇರಿದಂತೆ ಅನೇಕ ರೈತರು ಹಾಜರಿದ್ದರು.