ಮೈಸೂರು: ಮೈಸೂರು ನಗರದಲ್ಲಿ ಕಳೆದ ಎರಡು ತಿಂಗಳಿಂದ ಸರಗಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ಮ ವಿ ರಾಮಪ್ರಸಾದ್ ನೇತೃತ್ವದಲ್ಲಿ ಮನೆ, ಮನೆಗೆ ತೆರಳಿ ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು.
ಮಾಜಿ ನಗರಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ನೇತೃತ್ವದಲ್ಲಿ
ವಿದ್ಯಾರಣ್ಯಪುರಂನ ಅಂದಾನಿ ಸರ್ಕಲ್ ನಿಂದ ಮನೆ, ಮನೆಗೆ ತೆರಳಿ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಯಿತು.
ವಿದ್ಯಾರಣ್ಯಂ ಪೊಲೀಸ್ ಠಾಣೆ, ಮತ್ತು ಮಾ ವಿ ರಾಮಪ್ರಸಾದ್ ಸ್ನೇಹ ಬಳಗದ
ವತಿಯಿಂದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಿ ಜನರಿಗೆ ತಿಳುವಳಿಕೆ ನೀಡಲಾಯಿತು.
ಅಲ್ಲದೇ, ಜನರು ಹೆಚ್ಚಾಗಿ ಸೇರುವ ಉದ್ಯಾನವನ, ಯೋಗಾಸನ ಕೇಂದ್ರಗಳು, ವಾಯು ವಿಹಾರ ಮಾಡುವ ಸ್ಥಳಗಳ ಬಳಿ ತೆರಳಿ ಸರಗಳ್ಳತನದಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಮ.ವಿ ರಾಮಪ್ರಸಾದ್ ಜನರಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಮ.ವಿ ರಾಮ್ ಪ್ರಸಾದ್,ಸರಗಳ್ಳರು ಹೆಚ್ಚಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯೇ ಸಕ್ರಿಯವಾಗುವ ಕಾರಣ ಮಹಿಳೆಯರು ಹಾಗೂ ವೃದ್ಧರು ಹೊರಗೆ ಓಡಾಡುವಾಗ ಆಭರಣ ಪ್ರದರ್ಶನವನ್ನು ಮಾಡಬಾರದು. ಹಾಗೆ ಮಾಡುವುದರಿಂದ ಸರಗಳ್ಳರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಬೇಕು. ಒಂಟಿಯಾಗಿ ಓಡಾಡದೆ ಇಬ್ಬರಿಗಿಂತ ಹೆಚ್ಚಿನ ಜನರ ಗುಂಪಿನಲ್ಲಿ ಓಡಾಡಬೇಕು. ವಾಯು ವಿಹಾರ ಮಾಡುವಾಗ ನೆರೆಹೊರೆಯವರ ಜತೆ ಹೋಗಬೇಕು ಎಂದು ತಿಳಿಹೇಳಿದರು
ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೂ, ಅದನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಸರಗಳ್ಳತನ ನಿಯಂತ್ರಣ ಕಷ್ಟವಾಗುತ್ತಿದೆ. ಕಳ್ಳರಿಗೆ ಹಣ ಮಾಡಲು ಸರ ಅಪಹರಣ ಸುಲಭದ ದಾರಿಯಾಗಿದೆ ಎಂದು ರಸಮಪ್ರಸಾದ್ ಹೇಳಿದರು.
ಮುಂದಿನ ದಿನಗಳಲ್ಲಿ ಚಾಮುಂಡಿಪುರಂ ವಿದ್ಯಾರಣ್ಯಪುರಂ ಸೇರಿದಂತೆ ಪ್ರತಿಯೊಂದು ಪ್ರಮುಖ ವೃತದಲ್ಲಿ ಬೀದಿ ನಾಟಕ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು
ಸರಗಳ್ಳರ ವಿರುದ್ಧ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು,ಹಾಗೆಯೇ ಪೊಲೀಸ್ ಇಲಾಖೆ
ಮೊಹಲ್ಲಾಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ನೀಡಬೇಕು ಹಾಗೂ ಇಲಾಖೆಯು
ಪ್ರತಿ ಬಡಾವಣೆ ಗಳಲ್ಲಿ
ಸರಗಳ್ಳತನದ ಜಾಗೃತಿ ಮೂಡಿಸಬೇಕು ಎಂದು ಅವರು ಕೋರಿದರು.
ಈ ಅಭಿಯಾನದಲ್ಲಿ ವಿದ್ಯಾ ಅರಸು,
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳದ ಬೇಬಿ, ರಾಜು ಎಚ್ ಸಿ, ಕಿರಣ್ ಕುಮಾರ್, ಮಂಜುನಾಥ್, ಸೋಮೇಶ್,ಧರ್ಮೇಂದ್ರ,ಶಿವು,ಮಂಜುಳಾ, ದೇವೇಂದ್ರ ಸ್ವಾಮಿ,ದೇವಲಾಂಬಿಕ, ಸೂರ್ಯ, ಮುರುಗೇಶ್, ಮಹೇಶ್, ದ್ರಾಕ್ಷಾಯಿಣಿ,ಮಧು ಕುಮಾರ್, ಗುರುಮಲ್ಲಪ್ಪ,ರವಿಶಂಕರ್ ಮತ್ತಿತರರು ಭಾಗಿಯಾಗಿದ್ದರು.