ಸಾಂಸ್ಕೃತಿಕ ನಗರಿಯಲ್ಲಿ‌ ಬೆಳ್ಳಂಬೆಳಿಗ್ಗೆ ಚಿನ್ನದ ಸರ ದೋಚಿದ ಕಳ್ಳ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು,
ಸೋಮವಾರ ಬೆಳ್ಳಂಬೆಳಿಗ್ಗೆ ಕಳ್ಳ ವೃದ್ದೆಯೊಬ್ಬರ ಚಿನ್ನದ ಸರಕ್ಕೆ ಕೈ ಹಾಕಿ ದೋಚಲು ಯತ್ನಿಸಿ ಅರ್ಧ ಸರ ಕಿತ್ತ ಘಟನೆ ನಡೆದಿದೆ.

ಹೋಂಡಾ ಆಕ್ಟಿವಾ ಬೈಕ್ ನಲ್ಲಿ ಬಂದ ಸರಗಳ್ಳ ಮೈಸೂರಿನ ವಿದ್ಯಾರಣ್ಯಪುರಂ 4 ನೆ ಮೇನ್ 6 ನೆ ಕ್ರಾಸ್ ನಲ್ಲಿ
ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಕೈಚಳಕ ತೋರಿದ್ದಾನೆ.

ಕಳ್ಳ ಮಹಿಳೆಯ ಹಿಂದೆ ಬಂದು ಸರಕ್ಕೆ ಕೈ ಹಾಕಿ ಬಲವಾಗಿ ಎಳೆದಿದ್ದಾನೆ, ತಕ್ಷಣ ಆಕೆ ಕೂಗಿಕೊಂಡು ಕೆಳಗೆ ಬಿದ್ದಿದ್ದಾರೆ.ಸರ
ಎರಡು ತುಂಡಾಗಿ ಬಿದ್ದಿದೆ.

ಒಂದು ತುಂಡು ಅಂದರೆ 10 ಗ್ರಾಂ ಚಿನ್ನ ಕಳ್ಳನ ಪಾಲಾಗಿದೆ.ಇನ್ನರ್ಧ ಸರ ಮಹಿಳೆಗೆ ಸಿಕ್ಕಿದೆ.

ವೃದ್ದೆ ಸ್ನೇಹಿತರ ಮನೆಯಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಸ್ಥಳಕ್ಕೆ ಎಸಿಪಿ ರಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.