ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ದಟ್ಟಗಳ್ಳಿಯಲ್ಲಿ ದೇಸಿ ಗೋತಳಿ ಹಸು, ಕರುವಿಗೆ ಪೂಜೆ ಮಾಡಿ ಪ್ರಧಾನಿಗಳಿಗೆ ಹೆಚ್ಚಿನ ಅರೋಗ್ಯ, ಆಯಸ್ಸು ಕರುಣಿಸಿ ದೇಶ ಪ್ರಗತಿ ಪಥದತ್ತ ಮುನ್ನುಗ್ಗಲಿ ಎಂದು ಪ್ರಾರ್ಥಿಸಲಾಯಿತು.
ಇತ್ತೀಚಿಗಷ್ಟೇ ಪ್ರಧಾನಿಗಳ ನಿವಾಸದಲ್ಲಿ ಹಸು ಕರುವಿಗೆ ಜನ್ಮ ನೀಡಿದ್ದನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆ ಚಿತ್ರ ಅನೇಕರಿಗೆ ದೇಸಿ ತಳಿ ಹಸುಗಳನ್ನು ಸಾಕಲು ಪ್ರೇರಣೆಯಾಗಿದೆ.
ಪ್ರಧಾನಮಂತ್ರಿ ಎಲ್ಲಾ ಮತ, ಜಾತಿಯ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ, ಜನರಿಗೆ ಮಾತ್ರವಲ್ಲದೆ ದನಗಳಿಗೂ ಒಳಿತು ಮಾಡುವ ಮನಸ್ಸಿರುವ ಪ್ರಧಾನಿ ಈ ದೇಶಕ್ಕೆ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಅಭಿಮಾನಿಗಳು ಬಣ್ಣಿಸಿದರು.
ಅವರು ವಿಶ್ವ ನಾಯಕರ ಸಾಲಿನಲ್ಲಿ ಅಗ್ರ ಗಣ್ಯರಾಗಿ ಭಾರತವನ್ನು ಪ್ರಬಲ ಆರ್ಥಿಕ ಹಾಗೂ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆಸಲಿ ಎಂದು ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು,
ಚಾಮುಂಡೇಶ್ವರಿ ಕ್ಷೇತ್ರದ (ನಗರ) ಅಧ್ಯಕ್ಷರಾದ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಹೆಚ್.ಜಿ. ರಾಜಮಣಿ, ಬಿ.ಸಿ. ಶಶಿಕಾಂತ್, ಕಾರ್ಯದರ್ಶಿಗಳಾದ ವಿನುತಾ, ಕಲಾವತಿ, ತುಳಸಿ, ಯುವ ಮೋರ್ಚಾ ಅಧ್ಯಕ್ಷರಾದ ಮಧು ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್, ರಾಘವೇಂದ್ರ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶುಭಶ್ರೀ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.