ಅನಂತಕುಮಾರ್ ಹೆಗಡೆ‌‌ ವಿರುದ್ಧ ಎಫ್ಐಆರ್

ಬೆಂಗಳೂರು: ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಬೆಂಗಳೂರಿನ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಇಂದು ಸಂಜೆ ನೆಲಮಂಗಲ ಕಡೆಯಿಂದ ಅನಂತ್ ಕುಮಾರ್ ಹೆಗಡೆ ಅವರು ಇದ್ದ ಕಾರು ದಾಬಸ್ ಪೇಟೆ ಕಡೆ ಬರುತ್ತಿತ್ತು.

ಅವರ ಕಾರಿನ ಹಿಂದೆ ಮತ್ತೊಂದು ಕಾರು ಬರುವಾಗ ಅನಂತ್ ಕುಮಾರ್ ಹೆಗ್ಡೆ ಕಾರಿಗೆ ಟಚ್ ಆಗಿದೆ ಎಂದು ಹೇಳೆ ಆ ಕಾರನ್ನ ಹೆಗ್ಡೆ ಅವರ ಗನ್ ಮ್ಯಾನ್ ಮತ್ತು ಚಾಲಕ ತಡೆದಿದ್ದಾರೆ.

ಏಕಾಏಕಿ ಅನಂತಕುಮಾರ್ ಹೆಗಡೆಯವರ ಗನ್ ಮ್ಯಾನ್ ಮತ್ತು ಚಾಲಕ ಮುಂದಿನ ಕಾರಿನಲ್ಲಿದ್ದವರನ್ನು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆ ಮುಂದೆ ಹೋಗುತ್ತಿದ್ದ ಕಾರಿನವರು ದೂರು ನೀಡಿದ್ದಾರೆ.

ಅನಂತ್ ಕುಮಾರ್ ಹೆಗಡೆಯವರು ಕ್ಷಮೆ ಯಾಚಿಸಬೇಕು ನಮ್ಮ ಫ್ಯಾಮಿಲಿ ಅವರನ್ನು ಮನಬಂದಂತೆ ತಿಳಿಸಿದ್ದಾರೆ, ಡ್ರೈವರ್, ಗನ್ ಮ್ಯಾನ್ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಠಾಣೆ ಮುಂದೆ ಪ್ರತಿಭಟನೆ ಕೂಡ ನಡೆಸಿದರು.

ಸಧ್ಯ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ ದಾಬಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ