ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಶ್ರೀ ಪೆಟ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ರೇಬೀಸ್ ಲಸಿಕೆ ಶಿಬಿರ ಯಶಸ್ವಿಯಾಗಿ ಸಾಕು ಪ್ರಾಣಿಗಳು ಲಸಿಕೆ ಪಡೆದವು.
ಈ ಶಿಬಿರವನ್ನು ಪ್ರತಿವರ್ಷ ಶ್ರೀ ಪೆಟ್ ಆಸ್ಪತ್ರೆಯಲ್ಲಿ ಆಯೋಜಿಸಲಾಗುತ್ತದೆ.ಪಶು ವೈದ್ಯರಾದ ಡಾ.ದೀಪಕ್ ಅವರ ನೇತೃತ್ವದಲ್ಲಿ ಈ ವರ್ಷವೂ ಯಶಸ್ವಿಯಾಗಿ ನೆರವೇರಿತು.
ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಸಾಕುಪ್ರಾಣಿಗಳು,ಅದರಲ್ಲೂ ಪ್ರಮುಖವಾಗಿ ನಾಯಿಗಳು ಹಾಗೂ ಬೆಕ್ಕುಗಳು ಉಚಿತ ಲಸಿಕೆ ಪಡೆದವು.
ಶ್ರೀ ಪೆಟ್ ಆಸ್ಪತ್ರೆಯ ಸಂಸ್ಥಾಪಕರಾದ
ಶ್ರೀಯಾ ಮತ್ತು ಪಶುವೈದ್ಯರಾದ ಡಾ. ದೀಪಕ್ ಈ ಶಿಬಿರದ ಆಯೋಜಕರು.
ಶಿಬಿರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎಂ.ಕೆ. ಸವಿತಾ ಮತ್ತು ಉರಗ ತಜ್ಞ ಸ್ನೇಕ್ ಶಾಮ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ರೇಬೀಸ್ ತಡೆಗೆ ಜನಜಾಗೃತಿ ಮೂಡಿಸುವುದು ಹಾಗೂ ಜವಾಬ್ದಾರಿಯುತ ಸಾಕುಪ್ರಾಣಿ ಪಾಲನೆಗೆ ಉತ್ತೇಜನ ನೀಡಲು ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಕುಪ್ರಾಣಿ ಮಾಲೀಕರು ಈ ಉಚಿತ ಸೇವೆಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸಿ, ಪಶುವೈದ್ಯರ ತಂಡದ ಸೇವೆಯನ್ನು ಶ್ಲಾಘಿಸಿದರು.
