ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನು ಕೊಂದ ಪಾಪಿ ಪತಿ

Spread the love

ಮೈಸೂರು: ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನು ಪತಿ ಭೀಕರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಿಳಿಕೆರೆ ಹೋಬಳಿ ಬೆಂಕಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರೋಜಾ(37) ಕೊಲೆಯಾದ ದುರ್ದೈವಿ.

ಪತಿ ಸ್ವಾಮಿನಾಯಕ ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

12 ವರ್ಷಗಳ ಹಿಂದೆ ರೋಜಾ ಮತ್ತು ಸ್ವಾಮಿನಾಯಕ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅನ್ಯೋನ್ಯ ಜೀವನ ಸಾಗಿಸುತ್ತಿದ್ದರು.

5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಮಹಿಳೆ ಸ್ವಾಮಿನಾಯಕನ ಜೊತೆ ಸಂಭಂಧ ಬೆಳೆಸಿದ್ದಾಳೆ.ಈ ವಿಚಾರ ರೋಜಾ ಗಮನಕ್ಕೆ ಬಂದು ಜಗಳವಾಗಿದೆ.

ಆಗ ಸ್ವಾಮಿನಾಯಕನಿಗೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದಾರೆ.ಆದರೂ‌ ಸ್ವಾಮಿನಾಯಕ ಮಹಿಳೆಯ ಜೊತೆಗಿನ ಸಂಬಂಧ ಮುಂದುವರಿಸಿದ್ದ.

ಇದೇ ವಿಚಾರದಲ್ಲಿ ಗಂಡ ಹೆಂಡತಿ ಮತ್ತೆ ಜಗಳವಾಡಿದ್ದಾರೆ,ರೋಜಾ ಮಹಿಳೆಯ ಸಂಬಂಧ ಬಿಡುವಂತೆ ಪಟ್ಟು ಹಿಡಿದಿದ್ದಾಳೆ.

ಹೊರಗೆ ಹೋಗಿದ್ದ ಸ್ವಾಮಿನಾಯಕ ನೀರು ಹಿಡಿಯಲು ಮನೆಯಿಂದ ಹೊರಬಂದ ರೋಜಾ ಮೇಲೆ ಮೊಚ್ಚಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.ಇದರಿಂದ ರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನಂತರ ಸ್ವಾಮಿನಾಯಕ ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಹಾಗೂ ಡಿವೈಎಸ್ಪಿ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು,ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.